
ಶಿವಮೊಗ್ಗ: ಡಿ.27: ಶಿವಮೊಗ್ಗ ನಗರದ ಹೊಸ ಮನೆ ಬಡಾವಣೆಯ ನಾಲ್ಕನೇ ತಿರುವಿನಲ್ಲಿರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದಲ್ಲಿ ಇದೇ ತಿಂಗಳು ದಿನಾಂಕ 30 ರ ಮಂಗಳವಾರ ವೈಕುಂಠ ಏಕಾದಶಿಯ ಪ್ರಯುಕ್ತ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ, ದೇವಸ್ಥಾನದ ಸಮಿತಿ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿಯ ಪ್ರಯುಕ್ತ ನಗರದ ಹೊಸಮನೆ ಬಡಾವಣೆಯ ನಾಲ್ಕನೇ ತಿರುವಿನಲ್ಲಿ ಇರುವಂತಹ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷವಾಗಿ ವೈಕುಂಠ ಏಕಾದಶಿಯ ಪ್ರಯುಕ್ತ ಆ ದಿನ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಕರೆನೀಡಿದ್ದಾರೆ.

ಈ ದೇವಸ್ಥಾನದ ಪ್ರಧಾನ ಅರ್ಚಕರಾದ ಹಾಗೂ ಪ್ರಧಾನ ಕಾರ್ಯದರ್ಶಿ ಆದಂತ ಶ್ರೀನಿವಾಸ್ ಮೂರ್ತಿಯವರು ದೇವಸ್ಥಾನದ ಏಳಿಗೆಗಾಗಿ ಹಲವಾರು ವರ್ಷಗಳಿಂದ ಯಾವುದೇ ರೀತಿಯ ಲಾಭಿಗಾಗಿ, ಅರ್ಚಕರ ವೃತ್ತಿಯನ್ನು ನಿರ್ವಹಿಸದೆ. ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಏಳಿಗೆಗಾಗಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕೆಲವು ವರ್ಷಗಳಿಂದ ಲಕ್ಷ್ಮಿ ನರಸಿಂಹ ಸ್ವಾಮಿಯ ಕೃಪಾಕಟಾಕ್ಷದಿಂದ ಆಶೀರ್ವಾದದಿಂದ ತಮ್ಮ ವೃತ್ತಿಯನ್ನು ನ್ಯಾಯಯುತವಾಗಿ ಧರ್ಮ ನಿಷ್ಠೆಯಿಂದ ನಡೆಸಿಕೊಂಡು, ಪ್ರತಿವರ್ಷ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು. ಅಚ್ಚುಕಟ್ಟಾಗಿ, ನ್ಯಾಯ ಸಮ್ಮತವಾಗಿ, ದೇವಸ್ಥಾನಕ್ಕೆ ಬಂದಂತಹ ಭಕ್ತರಿಗೆ ಬಡವ, ಬಲ್ಲಿಗ, ಎನ್ನದೆ ಎಲ್ಲಾ ಭಕ್ತರನ್ನು ಪ್ರೀತಿಯಿಂದ, ವಿಶ್ವಾಸದಿಂದ, ಎಲ್ಲರೂ ಒಂದೇ, ಎಲ್ಲರೂ ಆ ಭಗವಂತನ ಮಕ್ಕಳೇ ಎಂಬ ಮನೋಭಾವನೆಯಿಂದ ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾ. ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವ ಶ್ರೀನಿವಾಸ್ ಮೂರ್ತಿಯವರು ಶಿವಮೊಗ್ಗ ನಗರದ ಹಲವಾರು ಗಣ್ಯರಿಗೆ ಹಾಗೂ ನಗರದ ಹಲವಾರು ಬಡಾವಣೆಯ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿಯ ಭಕ್ತಾದಿಗಳಿಗೆ ಪ್ರಿಯರಾಗಿದ್ದಾರೆ ಎಂಬುದು ದೇವಸ್ಥಾನಕ್ಕೆ ಬಂದಂತ ಭಕ್ತಾದಿಗಳ ಶ್ಲಾಘನೀಯ ಹಾಗೂ ಭಕ್ತಿ ಪೂರ್ವದ ವಿಚಾರಧಾರೆಯಾಗಿದೆ.

ದಿನಾಂಕ 30ನೇ ತಾರೀಕು ಮಂಗಳವಾರ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ , ಆರಾಧನೆ , ಭರತನಾಟ್ಯ ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಪ್ರಮುಖರ ಧಾರ್ಮಿಕ ಸಭೆ ಹಾಗೂ ಹಲವು ಕಾರ್ಯಕ್ರಮಗಳು ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಲಕ್ಷ್ಮಿ ನರಸಿಂಹ ಸ್ವಾಮಿಯ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೈಕುಂಠ ಏಕಾದಶಿಯ ಕಾರ್ಯಕ್ರಮವನ್ನು ವಿಜೃಂಭಣೆಯಿಂದ, ಭಕ್ತಿ ಪೂರಕವಾಗಿ, ಶ್ರದ್ಧೆಯಿಂದ, ಹಾಗೂ ತನು, ಮನ, ಧನ, ಸಹಾಯದೊಂದಿಗೆ ಈ ಕಾರ್ಯಕ್ರಮವನ್ನು ಪರಮಾತ್ಮನಿಗೆ ಮೆಚ್ಚುವಂತೆ ನಡೆಸಿ ಕೊಡಬೇಕೆಂದು ಹಾಗೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಕ್ಷ್ಮಿ ನರಸಿಂಹ ಸ್ವಾಮಿಯ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಶಿವಮೊಗ್ಗ ನಗರದ ಸಾರ್ವಜನಿಕರಿಗೆ ದೇವಸ್ಥಾನದ ವತಿಯಿಂದ ಕೋರಲಾಗಿದೆ.

“ಪೂಜಾ ಕಾರ್ಯಕ್ರಮಗಳ ವಿವರ”
ಡಿಸೆಂಬರ್ 30ರ ಮಂಗಳವಾರ ಬೆಳಿಗ್ಗೆ 9:00 ಗಂಟೆಯಿಂದ ಪೂಜಾ ವಿಧಿ ವಿಧಾನ ಆರಂಭಗೊಳ್ಳಲಿದ್ದು, ಮಧ್ಯಾಹ್ನ 12:30 ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಸಂಜೆ 6 ರಿಂದ ಸಪ್ತಸ್ವರ ಟ್ರಸ್ಟ್ ನ ಸಂಗೀತ ಕಲಾವಿದರಿಂದ ಸಂಗೀತ ಲಹರಿ ಭಕ್ತಿಗೀತೆಗಳ ಪ್ರಸ್ತುತತೆ ನಡೆಯಲಿದೆ. ತದನಂತರ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವರ ನವರೂಪದ ಭರತನಾಟ್ಯ ಕಾರ್ಯಕ್ರಮವನ್ನು ಪ್ರತಿಭಾವಂತ ಪುಟಾಣಿ ಕಲಾವಿದರು ನಡೆಸಿಕೊಡಲಿದ್ದಾರೆ.

ಮಧ್ಯಾಹ್ನ ಪೂಜೆಯ ನಂತರ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್ ,ಈಶ್ವರಪ್ಪ, ಸಚಿವ ಮಧು ಬಂಗಾರಪ್ಪ, ಸಂಸದ ಬಿ ವೈ ರಾಘವೇಂದ್ರ, ಶಾಸಕರಾದ ಚನ್ನಬಸಪ್ಪ ಡಿಎಸ್ ಅರುಣ್, ರುದ್ರೆಗೌಡ, ಮಂಜುನಾಥಗೌಡ, ಸೂಡಾಧ್ಯಕ್ಷ ಸುಂದರೇಶ್ ಸೇರಿದಂತೆ ಮುಂತಾದ ವಿವಿಧ ಗಣ್ಯರು ಆಗಮಿಸಲಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಹ ಗಣ್ಯರಿಗೂ ಹಾಗೂ ಭಕ್ತಾದಿಗಳಿಗೂ ಸ್ವಾಗತ ಕೋರುವವರು, ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಸುರೇಶ್ ಬಾಳೆಗುಂಡಿ, ಅಧ್ಯಕ್ಷ ಗಣೇಶ್ ಎಲ್, ಉಪಾಧ್ಯಕ್ಷ ಬಸವರಾಜ್ ಎಂ.ಆರ್., ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಧಾನ ಅರ್ಚಕರಾದ ಶ್ರೀನಿವಾಸ ಮೂರ್ತಿ ಹಾಗೂ ಪದಾಧಿಕಾರಿಗಳು.
More Stories
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?
ಜನಪ್ರತಿನಿಧಿಗಳ ಕರೆಗೆ ಅಧಿಕಾರಿಗಳು ಡೋಂಟ್ ಕೇರ್ :ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ..!!