City Rounds News

Kannada News Website

270 ಪ್ರಕರಣಗಳ ಪತ್ತೆ : ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದ ಜಿ. ಕೆ. ಮಿಥುನ್ ಕುಮಾರ್….!!

ದಿನಾಂಕ: 20-12-2025 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ, ಪೊಲೀಸ್ ಕವಾಯತು ಮೈದಾನ ಡಿಎಆರ್ ಶಿವಮೊಗ್ಗದಲ್ಲಿ 2025ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ  ಹಿಂದಿರುಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 2025ನೇ ಸಾಲಿನ 222 ಪ್ರಕರಣಗಳು ಮತ್ತು ಹಿಂದಿನ ವರ್ಷಗಳ 48 ಪ್ರಕರಣಗಳು ಸೇರಿ ಒಟ್ಟು 270 ಪ್ರಕರಣಗಳನ್ನು ಪತ್ತೆ ಮಾಡಿ, ಅಂದಾಜು ಮೌಲ್ಯು 6,43,65,477/-ರೂಗಳ ಮಾಲುಗಳನ್ನು ವಶ ವಶಪಡಿಸಿಕೊಂಡಿದ್ದು, ಮತ್ತು CEIR (Central Equipment Identity Register) 3015 ಫೋನ್ ಗಳನ್ನು ಪತ್ತೆಹಚ್ಚಲಾಗಿತ್ತು ಎಂದು ತಿಳಿಸಿದರು.

   

                 “270 ಪ್ರಕರಣಗಳ ಮೌಲ್ಯ 6,43,65,477/- ರೂ ವಾರಸುದಾರರಿಗೆ”

2025ನೇ ಸಾಲಿನಲಿ, ಶಿವಮೊಗ್ಗ, ಜಿಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 612 ಸ್ವತ್ತು ಕಳವು ಪ್ರಕರಣಗಳು ವರದಿಯಾಗಿರುತ್ತವೆ. ಸದರಿ ಪ್ರಕರಣಗಳಲಿ. 2 ಲಾಭಕ್ಕಾಗಿ ಕೊಲೆ, 8 ದರೋಡೆ, 17 ಸುಲಿಗೆ, 14 ಸರಗಳ್ಳತನ, 48 ಕನ್ನ ಕಳವು, 12 ಮನೆಗಳ್ಳತನ 37 ಸಾಮಾನ್ಯ ಕಳವು, 12 ಜಾನುವಾರು ಕಳವು, 53 ವಾಹನ ಕಳವು ಹಾಗೂ 19 ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 270 ಪ್ರಕರಣಗಳನ್ನು ಪತ್ತೆ ಮಾಡಿ ಅಂದಾಜು ಮೌಲ್ಯ 6,43,65,477/- ರೂ ಗಳ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ಮೊಬೈಲ್ ಫೋನ್, ವಾಹನಗಳು, ಜಾನುವಾರು, ನಗದು ಹಣ, ಎಲೆಕ್ಟ್ರಾನಿಕ್ ವಸ್ತುಗಳು, ಅಡಿಕೆ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿರುತ್ತದೆ, ಅಲ್ಲದೇ ಹಿಂದಿನ ವರ್ಷಗಳಲ್ಲಿ, ವರದಿಯಾದ ಪ್ರಕರಣಗಳಲ್ಲಿ,, 02 ದರೋಡೆ 17 ಮನೆಗಳ್ಳತನ್ನ 9 ಸಾಮಾನ್ಯ ಕಳವು ಮತ್ತು 1 ವಂಚನೆ ಮತ್ತು 19 ವಾಹನ ಕಳವು ಸೇರಿದಂತೆ ಒಟ್ಟು 48 ಪ್ರಕರಣಗಳನ್ನು ಸಹಾ ಪತ್ತೆ ಮಾಡಿ ಅಂದಾಜು ಮೌಲ್ಯ 89,43,125/- ರೂಗಳ ಮಾಲುಗಳನ್ನು ವಶಪಡಿಸಿಕೊಂಡಿದ್ದು ಸದರಿ ಸ್ವತ್ತುಗಳನ್ನು ಹಾಗೂ CEIR ಪೋರ್ಟಲ್ ಮುಖಾಂತರ ಪತ್ರ ಹಚ್ಚಲಾದ 1320 ಮೊಬೈಲ್ ಫೋನ್ ಗಳನ್ನು ಈ ದಿನ ವಾರಸುದಾರರಿಗೆ ಹಿಂದಿರುಗಿಸಲಾಯಿತು. ಸ್ವತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿ ಕಳೆದುಹೋದ ಮಾಲನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸುವಲಿ., ಪ್ರಮುಖ ಪಾತ್ರವಹಿಸಿದ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳ ಉತ್ತಮ ಕಾರ್ಯವನ್ನು ಪ್ರಶಂಸಿಸಿ ಅಭಿನಂದಿಸಿದರು.