ಶಿವಮೊಗ್ಗ: ಸೆ -18: ಸ್ವಚ್ಛ ಭಾರತ್ ಮಿಷನ್ ಯೋಜನೆಯ “ಸ್ವಚ್ಛೋತ್ಸವ” ಎಂಬ ಶೀರ್ಷಿಕೆಯಡಿ “ಸ್ವಚ್ಛತಾ ಹೀ ಸೇವಾ” ಕಾರ್ಯಕ್ರಮದ ಅಂಗವಾಗಿ
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಗರದ ವಾರ್ಡ್ ಸಂಖ್ಯೆ 27 ರ ಮಂಜುನಾಥ ಬಡಾವಣೆ ಪ್ರದೇಶದಲ್ಲಿ ಬ್ಲಾಕ್ ಸ್ಪಾಟ್ ನ್ನು ಗುರುತಿಸಿ, ಆ ಸ್ಥಳದಲ್ಲಿ ಕಸ, ಪ್ಲಾಸ್ಟಿಕ್, ಪರಿಸರ ಹಾನಿಕಾರಕ ತ್ಯಾಜ್ಯಗಳನ್ನು ಸುರಿಯಬಾರದು ಎಂದು ಸಸಿ ನೆಟ್ಟು ಮತ್ತು ಸಾರ್ವಜನಿಕ ಪ್ರಕಟಣೆ ನಾಮಫಲಕವನ್ನು ಅಳವಡಿಸಿ, ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಆರೋಗ್ಯಕರವಾಗಿ, ಸ್ವಚ್ಛತೆಯನ್ನು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ವಿಚಾರವಾಗಿ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಸದರಿ ಪ್ರದೇಶದ ನಿವಾಸಿಗಳು, ಪ್ರಮುಖರು, ಶ್ರೀ ವಿದ್ಯಾದೀಪ ಪರಿಸರ ಸೇವಾ ಸಂಘದವರು , ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರು ಉಪಸ್ಥಿತರಿದ್ದರು.


More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…