ಶಿವಮೊಗ್ಗ : ನಗರದ ಅಲ್ಲಮ ಪ್ರಭು ಪಾರ್ಕಿನ ಆವರಣದಲ್ಲಿ ಇಂದು ದಿನಾಂಕ 15 -9 -2025 ರ ಸೋಮವಾರದಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. “ನಮ್ಮ ಮತ ನಮ್ಮ ಹಕ್ಕು ” ಅಭಿಯಾನದ ಕಾರ್ಯಕ್ರಮವನ್ನು ಸೈಕಲ್ ಜಾತದ ಮೂಲಕ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿ ಗುರುದತ್ ಹೆಗಡೆ,

ಸಮಾಜ ಕಲ್ಯಾಣ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉನ್ನತ ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಪೊಲೀಸ್ ಇಲಾಖೆ ಶಿವಮೊಗ್ಗ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಭಿಯಾನ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಚರಿಸಲು ಬಂದಂತಹ ಅಧಿಕಾರಿಗಳಿಗೆ ಕಾರ್ಯಕ್ರಮ ಆಚರಿಸುತ್ತಿರುವ ಅಲ್ಲಮಪ್ರಭು ಉದ್ಯಾನವನದಲ್ಲಿ ಹಾಗೂ ಭಾರತದ ಸಂವಿಧಾನ ದ ಪ್ರತಿರೂಪದ ಸ್ಥಳವನ್ನು ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಸ್ವಚ್ಛಗೊಳಿಸದೆ ಕೇವಲ ತರ ತುರಿಯಲ್ಲಿ ಕಾರ್ಯಕ್ರಮವನ್ನು ಆಚರಿಸಲಾಯಿತು ಎಂದು ಅಲ್ಲಮಪ್ರಭು ಉದ್ಯಾನವನಕ್ಕೆ ಬೆಳಗಿನ ಜಾವ ವಾಕಿಂಗ್ ಹಾಗೂ ಕ್ರೀಡೆಗಳಿಗೆ ಬಂದಂತಹ ಸಾರ್ವಜನಿಕರ ದೂರು.
ಉದ್ಯಾನವನಕ್ಕೆ ವಾಕಿಂಗ್ ಹಾಗೂ ವಾಯು ಸಂಚಾರಕ್ಕೆಂದು ಬೆಳಗಿನ ಜಾವ ಬಂದಂತಹ ಸ್ಥಳೀಯ ನಾಗರಿಕರ ದೂರಿನ ವಿಚಾರವೇನೆಂದರೆ ಕಾರ್ಯಕ್ರಮ ನಡೆದ ಸ್ಥಳದ ಅಕ್ಕ ಪಕ್ಕದಲ್ಲಿ ಯಾರೋ ಮಧ್ಯ ವ್ಯಸನಿಗಳು ಬಿಯರ್ ಬಾಟಲಿಗಳನ್ನು ಹಾಗೂ ಮಧ್ಯದ ಪ್ಯಾಕೆಟ್ ಗಳನ್ನು. ಅಲ್ಲಮಪ್ರಭು ಉದ್ಯಾನದ ಒಳಭಾಗದಲ್ಲಿ ಇರುವಂತ ಭಾರತ ಸಂವಿಧಾನದ ಪ್ರತಿರೂಪವನ್ನು ನಿರ್ಮಿಸಿರುವಂತ ಸ್ಥಳದ ಅಕ್ಕಪಕ್ಕದಲ್ಲಿಯೇ ಮಧ್ಯದ ಬಾಟಲಿಗಳನ್ನು ಹಾಗೂ ಇನ್ನಿತರ ಪ್ಲಾಸ್ಟಿಕ್ ಗಳನ್ನು ಹಾಗೂ ಇನ್ನೂ ಅನೇಕ ರೀತಿಯ ಪ್ಲಾಸ್ಟಿಕ್ ಬಳಕೆಯ ವಸ್ತುಗಳನ್ನು ಚಿಲ್ಲಾ ಪಿಲ್ಲಿಯಾಗಿ ಎಸೆದು ಬಿಟ್ಟಿರುತ್ತಾರೆ.
ಈ ರೀತಿಯಾಗಿ ಚಿಲ್ಲಾ ಪಿಲ್ಲಿಯಾಗಿ ಎಸೆದಂಥ ಮಧ್ಯದ ಬಾಟಲಿಗಳಾಗಲಿ ಮತ್ತು ಮಧ್ಯದ ಪ್ಲಾಸ್ಟಿಕ್ ಪೌಚ್ ಗಳಾಗಲಿ ಇನ್ನು ಅನೇಕ ರೀತಿಯ ವಸ್ತುಗಳನ್ನು ಸ್ವಚ್ಛಗೊಳಿಸದೆ, ಸ್ವಚ್ಛಗೊಳಿಸಲು ಸಂಬಂಧ ಪಟ್ಟ ಇಲಾಖೆಯ ಸಿಬ್ಬಂದಿಗಳಿಗೆ ತಿಳಿಸದೆ, ಅಲ್ಲಮಪ್ರಭು ಉದ್ಯಾನವನದಲ್ಲಿ ಮಧ್ಯ ವ್ಯಸನಿಗಳಿಗೆ ಪ್ರವೇಶ ನೀಡದೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಶಪಿಸುತ್ತಿದ್ದಾರೆ.
ಅಲ್ಲಮ್ಮ ಪ್ರಭು ಉದ್ಯಾನವನದಲ್ಲಿ ಪ್ರತಿದಿನ ಸಾಯಂಕಾಲ ಕತ್ತಲಾಯಿತು ಎಂದರೆ ಮಧ್ಯವಸನಿಗಳು ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳು ಓಸಿ ಹಾಗೂ ಇಸ್ಪೀಟ್ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. 
ಬೆಳಗಿನ ಜಾವ ಹಾಗೂ ಸಾಯಂಕಾಲದ ಸಮಯದಲ್ಲಿ ವಾಯು ವಿಹಾರಕ್ಕೆ ಎಂದು ಬರುವಂತ ನಾಗರಿಕರಿಗೆ ಅಲ್ಲಲ್ಲೇ ಹೊಡೆದು ಚೂರಾಗಿರುವಂಥ ಮಧ್ಯದ ಬಾಟಲಿಗಳಿಂದ ಹಾಗೂ ಅನೇಕ ರೀತಿಯ ಕಸ ಕಡ್ಡಿಗಳಿಂದ ವಾಕಿಂಗ್ ಮಾಡಲು ಹಾಗೂ ವಾಯು ವಿಹಾರಕ್ಕೆ ತೊಂದರೆಯಾಗುತ್ತಿದ್ದು ಮತ್ತು ಉದ್ಯಾನವನದ ತುಂಬೆಲ್ಲ ಅನೇಕ ರೀತಿಯ ಕಸ ಕಡ್ಡಿಗಳು ಪ್ಲಾಸ್ಟಿಕ್ ಗಳು ಇನ್ನಿತರ ವಸ್ತುಗಳು ಸ್ವಚ್ಛಗೊಳಿಸಿದೆ ಇರುವುದರಿಂದ ಅಲ್ಲಮ ಪ್ರಭು ಉದ್ಯಾನವಕ್ಕೆ ಬರುವಂತಹ ಸ್ಥಳೀಯ ನಾಗರಿಕರಿಗೆ ಹಲವು ಸಮಸ್ಯೆಗಳಾಗುತ್ತಿದ್ದು.

ಜಿಲ್ಲಾಧಿಕಾರಿಗಳು ಈ ವಿಚಾರವಾಗಿ ಸಂಬಂಧಪಟ್ಟ ಇಲಾಖೆಗೆ, ಅಲ್ಲಮಪ್ರಭು ಉದ್ಯಾವನವನ್ನು ಸ್ವಚ್ಛವಾಗಿಡಲು ಹಾಗೂ ಇನ್ನಿತರ ಅನೈತಿಕ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಕ್ರಮಕೈಗೊಳ್ಳಲು ಸೂಚಿಸಬೇಕೆಂದು ಸಾರ್ವಜನಿಕರ ಪರವಾಗಿ (ಸಿಟಿ ರೌಂಡ್ಸ್) ಪತ್ರಿಕೆಯ ಬಳಗದಿಂದ ಮನವಿ…

More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…