City Rounds News

Kannada News Website

  ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2, ಅಧಿಕಾರಿಯಾಗಿ ಎಸ್. ರಮೇಶ್ ಕುಮಾರ್..!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್

 

 

 ಶಿವಮೊಗ್ಗ : ಈ ದಿನ ದಿನಾಂಕಃ 05-08-2025 ರಂದು ಪೂರ್ವಾಹ್ನ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2, ಅಧಿಕಾರಿಯಾಗಿ. ಶಿವಮೊಗ್ಗ ಜಿಲ್ಲೆಗೆ ಬಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದು, ಶಿವಮೊಗ್ಗ ಜಿಲ್ಲೆ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ.

 

ದಿನಾಂಕ: ಜೂಲೈ -03 ರಂದು ಶಿವಮೊಗ್ಗ ಜಿಲ್ಲೆಯ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು_1 ಅನಿಲ್ ಕುಮಾರ್ ಎಸ್ ಭೂಮರಡ್ಡಿ ರವರು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆಗೊಂಡಿದ್ದು.

 

 ಇವರ ಸ್ಥಾನಕ್ಕೆ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ರವರಿಗೆ ಎ. ಜಿ. ಕಾರಿಯಪ್ಪ ರವರಿಗೆ ಕರ್ತವ್ಯವನ್ನು ಹಸ್ತಾಂತರಿಸಿ, ಕರ್ತವ್ಯದಿಂದ ಬಿಡುಗಡೆ ಹೊಂದಿದ್ದರು. ಹಾಗೂ ಪೊಲೀಸ್ ಅಧೀಕ್ಷಕರು-1, ಎ. ಜಿ. ಕಾರಿಯಪ್ಪ ರವರು ಅಧಿಕಾರ ಸ್ವೀಕರಿಸಿದರು. 

 

ಶಿವಮೊಗ್ಗ ಜಿಲ್ಲಾ ಅಧೀಕ್ಷಕರು-2 ಸ್ಥಾನಕ್ಕೆ ದಿನಾಂಕ:05-08-2025 ಈ ದಿನದಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಹುದ್ದೆಯ ಸಂಪೂರ್ಣ ಪ್ರಭಾರವನ್ನು ಎಸ್. ರಮೇಶ್ ಕುಮಾರ್, ವಹಿಸಿಕೊಂಡು ಮುಂದುವರೆದಿರುತ್ತಾರೆ.