City Rounds News

Kannada News Website

ಶಿವಮೊಗ್ಗ ಜಿಲ್ಲಾ ಉಪ್ಪಾರ ಸಮಾಜದ ವತಿಯಿಂದ ಸಮಾಜದ ಬಾಂಧವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು..!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್ 

ಅಣ್ಣಪ್ಪ. ಎಂ 

 

ಶಿವಮೊಗ್ಗ: 03 ಜುಲೈ  ಇಂದು ಶಿವಮೊಗ್ಗ ಜಿಲ್ಲಾ ಉಪ್ಪಾರ ಸಮಾಜದ ವತಿಯಿಂದ ಸಮಾಜದ ಬಾಂಧವರದ ಮಿಥುನ್ ಕುಮಾರ್, ಶಿವಮೊಗ್ಗ ಮಹಾನಗರ ಪಾಲಿಕೆಯ ನೀರು ಸರಬರಾಜು ಹಾಗೂ ನಗರ ಒಳಚರಂಡಿ ಹಾಗೂ ಜಲ ಮಂಡಳಿ ಇಲಾಖೆಯ ಇಂಜಿನಿಯರ್ ಆಗಿ ಉತ್ತಮ ಕಾರ್ಯನಿರ್ವಹಿಸಿ ಇಂದು ತುಮಕೂರು ಜಿಲ್ಲೆಗೆ ವರ್ಗಾವಣೆಗೊಂಡಂತಹ ಉಪ್ಪಾರ ಸಮಾಜದ ಬಾಂಧವರಾದ ಮಿಥುನ್ ಅವರು ಸುಮಾರು 10 ವರ್ಷಗಳ ಕಾಲ ನಿರಂತರವಾಗಿ ತಮ್ಮ ಕರ್ತವ್ಯವನ್ನು ದಕ್ಷ ಆಡಳಿತದಿಂದ ಕಾರ್ಯನಿರ್ವಹಿಸಿ ಒಳ್ಳೆಯ ಹೆಸರನ್ನು ಗಳಿಸಿ ತಮ್ಮ ಕರ್ತವ್ಯಕ್ಕೂ ಹಾಗೂ ಸಮಾಜಕ್ಕೂ ಒಳ್ಳೆಯ ಹೆಸರನ್ನು ತಂದಿರುತ್ತಾರೆ.

ಸಮಾಜದ ಬಾಂಧವರಾದ ಮತ್ತೊಬ್ಬರು ಇತ್ತೀಚೆಗೆ ಒಳಚರಂಡಿ ಮತ್ತು ನಗರ ನೀರು ಸರಬರಾಜು ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿ  ನಿವೃತ್ತಿಯಾದಂತಹ ಬಾಬಣ್ಣರವರು ಹಾಗೂ ಆರೋಗ್ಯ ಇಲಾಖೆಯಲ್ಲಿ ಎಲ್ಲಾ ವರ್ಗದವರಿಗೂ ನಿಷ್ಠೆಯಿಂದ ಕರ್ತವ್ಯ ಸಲ್ಲಿಸಿದನ್ನು ಸರ್ಕಾರ ಗುರುತಿಸಿ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದಂತಹ ಸಮಾಜದ ಬಾಂಧವರಾದ ಪರಪ್ಪನವರಿಗೆ 2023-24ನೇ ಸಾಲಿನಲ್ಲಿ ಸಾಗರದಲ್ಲಿ ಬಿಸಿ ರಾಯ್ ರಾಷ್ಟ್ರಪತಿ. ಹಾಗೂ 2024-2025 ಸಾಲಿನ ರಾಜ್ಯ ವೈದ್ಯ ಶ್ರೀ ಪ್ರಶಸ್ತಿ ಪಡೆದಿದ್ದಾರೆ. ಉಪ್ಪಾರ ಸಮಾಜದ ಬಾಂಧವರಾದ ಇವರುಗಳಿಗೆ ಇಂದು ಶಿವಮೊಗ್ಗ ಜಿಲ್ಲಾ ಉಪ್ಪಾರ ಸಮಾಜ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಸ್ತಾವಿಕ ಭಾಷಣ.. ಕೆ ದೇವೇಂದ್ರಪ್ಪನವರು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಟಿ.. ಹಾಲಪ್ಪನವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಕುಂಸಿ ಬಾಬಣ್ಣನವರು. ಮಾಜಿ ಮೇಯರ್ ಕಂಕರಿ ನಾಗರಾಜ್, ಬೊಮ್ಮನಕಟ್ಟೆ ಮಂಜುನಾಥ್, ಕುಂಸಿ ಮೋಹನ್, ಕಾಶಿಪುರ ವಿಜಯಕುಮಾರ್. ಸಿಟಿ ರೌಂಡ್ಸ್ ಪತ್ರಿಕೆಯ ಸಂಪಾದರಕರಾದ ಅಣ್ಣಪ್ಪ. ಎಂ, ಕಾರ್ಯದರ್ಶಿ ಮಂಜುಳಮ್ಮ, ಪತ್ರಿಕ ವಿತರಕರ ಸಂಘದ ಅಧ್ಯಕ್ಷರಾದ ಮಾಲತೇಶ್. ಮುರುಳಿ, ಬೊಮ್ಮನಕಟ್ಟೆ ಮಾಲ್ತೇಶ್, ಹಾಗೂ  ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.