City Rounds News

Kannada News Website

ಆಯುಕ್ತರಾದ ಮಾಯಣ್ಣಗೌಡರು ನೀಡಿದ ಸೂಚನೆ ಹಾಗೂ ಎಚ್ಚರಿಕೆಗಳೆನು…!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್

ಅಣ್ಣಪ್ಪ. ಎಂ

 

ಶಿವಮೊಗ್ಗ : ದಿನಾಂಕ 25 -6 -2025 ರಂದು ಇಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾದ ಮಾಯಣ್ಣಗೌಡರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ಕಂದಾಯ ವಿಭಾಗದ ವಲಯ 1ಕ್ಕೆ ಭೇಟಿ ನೀಡಿ ಕಂದಾಯ ವಿಭಾಗದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹೊರಗುತ್ತಿಗೆ ನೌಕರರಿಗೆ ಹಲವು ಸೂಚನೆಗಳನ್ನು ಹಾಗೂ ಎಚ್ಚರಿಕೆಯನ್ನು ನೀಡಿದರು.

ಸರ್ಕಾರದ ಕೆಲಸ ಪುಣ್ಯದ ಕೆಲಸ ,ಸರ್ಕಾರದ ಕೆಲಸ ನಮಗೆ ನಿಮಗೆಲ್ಲ ಸಿಕ್ಕಿರುವುದು ನಮ್ಮ ನಿಮ್ಮ ಪುಣ್ಯ ಹಾಗೆಯೇ ನಮಗೆ ಸಂಬಳ ನೀಡುತ್ತಿರುವುದು ಸಾರ್ವಜನಿಕರು, ಅವರು ನಮಗೆ ದೇವರಿದ್ದಂತೆ, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಬಂದಾಗ ಅವರನ್ನು ಗೌರವದಿಂದ ಪ್ರೀತಿಯಿಂದ ಮಾತನಾಡಿಸಬೇಕು. ಅವರ ಸಮಸ್ಯೆಗೆ ಸ್ಪಂದಿಸಬೇಕು ಯಾವುದೇ ರೀತಿಯ ಮನಸ್ಸಿಗೆ ಕಿರಿಕಿರಿ ಉಂಟಾಗದಂತೆ ಸಾರ್ವಜನಿಕರ ಸಮೀಪ ಅಧಿಕಾರಿಗಳಾಗಲಿ ಸಿಬ್ಬಂದಿಗಳಾಗಲಿ ವರ್ತಿಸಬಾರದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯದ 10 ಮಹಾನಗರ ಪಾಲಿಕೆಯಲ್ಲಿ ಒಂದಾದ ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ವಲಯಗಳಾಗಿ ಇತ್ತೀಚಿಗೆ ವಿಂಗಡಿಸಲಾಗಿದೆ. ವಲಯ ಕಚೇರಿಯ ಕಟ್ಟಡದ ವ್ಯವಸ್ಥೆಯನ್ನು ಐಟಿಬಿಟಿ ಕಂಪನಿಗಳಂತೆ ವಿನ್ಯಾಸಗೊಳಿಸಿ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ರೂಪಿಸಲಾಗುತ್ತಿದೆ. ಇನ್ನೆರಡು ಮೂರು ತಿಂಗಳಲ್ಲಿ ಕಚೇರಿಯ ಎಲ್ಲಾ ರೀತಿಯ ಕಾಮಗಾರಿಗಳು ಪೂರ್ಣಗೊಳ್ಳುತ್ತದೆ ಎಂದು ಹೇಳಿದರು .

ಕಂದಾಯ ವಿಭಾಗ,ಅಭಿಯಂತರ ವಿಭಾಗ,ಆರೋಗ್ಯ ನಿರೀಕ್ಷಕರ ವಿಭಾಗ ಒಳಗೊಂಡಂತ ಸುಸಜ್ಜಿತವಾದ ಕಟ್ಟಡವನ್ನು ತಮ್ಮ ಕಟ್ಟಡವೆಂಬ ಭಾವನೆಯೊಂದಿಗೆ ಅಚ್ಚುಕಟ್ಟಾಗಿ ಎಲ್ಲ ವಿಭಾಗದ ಅಧಿಕಾರಿಗಳು ಸಿಬ್ಬಂದಿಗಳು ಕಚೇರಿಯನ್ನು ವ್ಯವಸ್ಥಿತವಾಗಿ, ಶುಚಿಯಾಗಿ,ಇಟ್ಟುಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದರು.

ಸಾರ್ವಜನಿಕರ ಕಡತಗಳನ್ನು ವಿಲೇವಾರಿ ಮಾಡುವ ವಿಚಾರದಲ್ಲಿ ಯಾರು ಸಮಯ ವ್ಯರ್ಥ ಮಾಡಬಾರದು ಹಾಗೂ ಸಾರ್ವಜನಿಕರ ಕೆಲಸಗಳಿಗೆ ಪ್ರಾಮುಖ್ಯತೆ ನೀಡಬೇಕು.ಸರ್ವರ್ ಇಲ್ಲ ಎಂಬ ಕಾರಣವನ್ನು ಹೇಳಿ ಕಾಲಹರಣ ಮಾಡಬಾರದು ಸರ್ವರ್ ಇಲ್ಲದ ಸಮಯದಲ್ಲಿ ಬೆಳಗಿನ ಸಮಯ 7 ಗಂಟೆಗೆ ಕಚೇರಿಗೆ ಆಗಮಿಸಿ 11 ಗಂಟೆಯ ತನಕ ಕೆಲಸ ನಿರ್ವಹಿಸಿ ಆನಂತರ ವಿಶ್ರಾಂತಿ ಪಡೆದುಕೊಳ್ಳಿ, ಸರ್ವರಿಲ್ಲ ಎಂಬ ಕಾರಣ ಹೇಳಿಕೊಂಡು ಸಮಯ ಕಳೆಯಬಾರದು ಎಂದು ಕಠೋರವಾಗಿ ಎಚ್ಚರಿಕೆ ನೀಡಿದರು.

ಕಚೇರಿಯ ಎಲ್ಲಾ ವಿಭಾಗಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಬಾರದಂತೆ ಬಂದವರಿಗೆ ಕುಳಿತುಕೊಳ್ಳಲು ಆಸನಗಳನ್ನು ನೀಡಿ ಸಾರ್ವಜನಿಕರ ಕೆಲಸಗಳಿಗೆ ಉದಾಹರಣೆಗಳನ್ನು ನೀಡದೆ ಸರಿಯಾದ ಸಮಯಕ್ಕೆ ಸಾರ್ವಜನಿಕರ ಕೆಲಸವನ್ನು ಪೂರ್ಣಗೊಳಿಸಬೇಕು. ಹಾಗೆಯೇ ಅವರ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಅವರ ಕೆಲಸಗಳು ಆದ ನಂತರ ಕರೆ ಮಾಡಿ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಸೂಚಿಸಿದರು.

ಕಚೇರಿಯಲ್ಲಿ ಯಾರೇ ಆಗಲಿ ಸಾರ್ವಜನಿಕರ ವಿರುದ್ಧ ನಿರ್ಲಕ್ಷ ತೋರುವುದು,ಲಂಚಕ್ಕಾಗಿ ಪಿಡಿಸುವುದು ಇನ್ಯಾವುದೋ ರೀತಿಯ ಸಬೂಬುಗಳನ್ನು ಹೇಳುವುದು, ಸಾರ್ವಜನಿಕರನ್ನು ಅಲೆದಾಡಿಸುವುದು ನಿರ್ಲಕ್ಷಿಸುವುದು ಈ ರೀತಿಯ ದೂರುಗಳು ಬಂದಲ್ಲಿ ಯಾವುದೇ ರೀತಿಯ ಮುಲಾಜಿಲ್ಲದೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಮ್ಮ ನಿಮ್ಮ ಧ್ಯೇಯ ಒಂದೇ ಸಾರ್ವಜನಿಕರಿಗೆ ಅನುಕೂಲವಾಗುವಂತ ರೀತಿಯಲ್ಲಿ ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕೆಂದು ಕಠೋರವಾಗಿ ಇಲಾಖೆ ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ ಗುಡಗಿದರು. ಹದಿನೈದು ದಿನದ ಒಳಗಾಗಿ ಸಾರ್ವಜನಿಕರ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಬೇಕು. ಕಡತಗಳಲ್ಲಿ ಸಮಸ್ಯೆಗಳಿದ್ದರೆ ಕಂದಾಯ ಅಧಿಕಾರಿಗಳಿಗೆ ಸೂಚಿಸಬೇಕು,ಕಂದಾಯ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಮ್ಮನ್ನು ಭೇಟಿ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕೆಂದು ತಿಳಿಸಿದರು .

 

ಮಹಾನಗರ ಪಾಲಿಕೆಯ ವಲಯ 1ರ ವಿಭಾಗಕ್ಕೆ ಭೇಟಿ ನೀಡಿದ ಆಯುಕ್ತರು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಸೂಚನೆಗಳನ್ನು ಹಾಗೂ ಕೆಲವು ಎಚ್ಚರಿಕೆಗಳನ್ನು ಇಂಜಿನಿಯರ್ ಹಾಗೂ ಕಂದಾಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಎಚ್ಚರಿಕೆ ಹಾಗೂ ಹಲವು ಸೂಚನೆಗಳನ್ನು ನೀಡಿದರು. ತಮ್ಮ ಕೆಲಸದ ನಿಮಿತ್ತ ಕಚೇರಿಗೆ ಬಂದಂತಹ ಸಾರ್ವಜನಿಕರು, ಆಯುಕ್ತರಾದ ಮಾಯಣ್ಣ ಗೌಡರವರು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನೀಡಿದ ಸಲಹೆ ಮತ್ತು ಸೂಚನೆಗಳನ್ನು ಕಂಡು ಹಾಗೂ ಸಾರ್ವಜನಿಕ ಪರವಾದಂತಹ ಕರ್ತವ್ಯ ನಿಷ್ಠೆಯನ್ನು ಕಂಡು ಅಧಿಕಾರಿಗಳೆಂದರೆ ಮಾಯಣ್ಣ ಗೌಡರವರಂತಿರಬೇಕೆಂದು ಆಯುಕ್ತರನ್ನು ಶ್ಲಾಘಿಸಿದರು.