ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ . ಎಂ
ಶಿವಮೊಗ್ಗ: 2024ರ ಜೂನ್ ತಿಂಗಳಿನಿಂದ 06-2025ರ ಅವಧಿಯ ಮಹಾನಗರ ಪಾಲಿಕೆ ಎಂದರೆ ಸಾರ್ವಜನಿಕರಿಗೆ ಭ್ರಷ್ಟಾಚಾರ, ಅಸಡ್ಡೆ, ಇರಿಸು ಮುರಿಸು, ಸಾರ್ವಜನಿಕರಿಗೆ ಸ್ಪಂದಿಸದ ಕೆಲ ಅಧಿಕಾರಿಗಳು ಆಯುಕ್ತರು ಎಂಬಂತೆ ಶಿವಮೊಗ್ಗ ನಗರದ ಸಾರ್ವಜನಿಕರು ರೋಸಿ ಹೋಗಿದ್ದರು. ಇದಕ್ಕೆ ಕಾರಣ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಕವಿತಾ ಯೋಗಪ್ಪನವರ್. ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಫಲರಾದ ಶಿವಮೊಗ್ಗ ಕಂಡ ಕಡು ಭ್ರಷ್ಟ ಹಾಗೂ ನಿರ್ಲಕ್ಷ ಆಯುಕ್ತರು ಎಂದರೆ, ಇವರೇ ಎನ್ನುತ್ತಾರೆ ಶಿವಮೊಗ್ಗ ನಗರದ ಸಾರ್ವಜನಿಕರು.
ಕಾರಣ ಸಾರ್ವಜನಿಕರ ಸಮಸ್ಯೆಗೆಂದು ಆಯುಕ್ತರನ್ನು ಭೇಟಿ ನೀಡಲು ಹೋದರೆ ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ದುರಹಂಕಾರದಿಂದ ವರ್ತಿಸುತ್ತಾ ಸುಳ್ಳುಪಳ್ಳುಗಳನ್ನು ಹೇಳಿಕೊಂಡು ಸಾರ್ವಜನಿಕರ ಭೇಟಿಗೆ ಸಿಗದೆ ಕೇವಲ ಲೇಔಟ್ ಮಾಲೀಕರನ್ನುಗಳನ್ನು ಮಾತ್ರ ಸಂಪರ್ಕಿಸುತ್ತ, ಶಿವಮೊಗ್ಗ ನಗರದ ಅಭಿವೃದ್ಧಿಗೆ ಶೂನ್ಯ ಕೊಡುಗೆಯನ್ನು ಕೊಟ್ಟಿರುವಂತಹ ಮಹಾನಗರ ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರನ್ನು ಶಿವಮೊಗ್ಗ ನಗರದಿಂದ ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆಗೆ ಪ್ರಮುಖ ಕಾರಣರಾದವರು. ಶಿವಮೊಗ್ಗ ನಗರದ ಪತ್ರಿಕೆಗಳು.

ಸಿಟಿ ರೌಂಡ್ಸ್ ಪತ್ರಿಕೆ. ಕವಿತಾ ಯೋಗಪ್ಪನವರ ಭ್ರಷ್ಟಾಚಾರ ಆಡಳಿತ ವಿರುದ್ಧ ಸತತವಾಗಿ ಸರ್ಕಾರಕ್ಕೆ ದೂರನ್ನು ಸಲ್ಲಿಸಲಾಗಿತ್ತು ಹಾಗೂ ಪತ್ರಿಕೆಯಲ್ಲಿ ಪ್ರಕಟಣೆ ಮಾಡಲಾಗಿತ್ತು. ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಆಯುಕ್ತರ ಭ್ರಷ್ಟ ಆಡಳಿತವನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು. ಅದರಂತೆ ಸರ್ಕಾರ ಉತ್ತಮ ನಿರ್ಧಾರವನ್ನು ತೆಗೆದುಕೊಂಡಿರುವುದಕ್ಕೆ ಶಿವಮೊಗ್ಗ ನಗರದ ಜನತೆಯ ಪರವಾಗಿ ಸಿಟಿ ರೌಂಡ್ಸ್ ಪತ್ರಿಕೆ ಬಳಗದಿಂದ ಸರ್ಕಾರಕ್ಕೆ ಶ್ಲಾಘನೀಯ ಕೋರುತ್ತೇವೆ.
ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿ ಆಗಮಿಸುತ್ತಿರುವ ಕರ್ತವ್ಯವೇ ದೇವರು ಎಂದು ನಂಬಿರುವ, ಅದರಂತೆಯೇ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಆಡಳಿತವನ್ನು ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಂತಹ ಉತ್ತಮ ಅಧಿಕಾರಿ ನಿಷ್ಠಾವಂತ ಅಧಿಕಾರಿ, ಜನ ಸ್ನೇಹಮಹಿ ಅಧಿಕಾರಿ, ಸಾರ್ವಜನಿಕರ ಪರವಾದ ಅಭಿವೃದ್ಧಿಗಾಗಿ ಸತತವಾಗಿ ಶಿವಮೊಗ್ಗ ನಗರವನ್ನು ಉತ್ತಮ ರೀತಿಯಲ್ಲಿ ಕೊಂಡೊಯ್ದಂತಹ, ಹಲವಾರು ಯೋಜನೆಗಳನ್ನು ರೂಪಿಸುವಲ್ಲಿ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾದಂತಹ ಅಧಿಕಾರಿ, ಜನಸೇವೆಯೇ ಜನಾರ್ದನ ಸೇವೆ ಎಂಬಂತೆ ತಮ್ಮ ಕರ್ತವ್ಯವನ್ನು ಪಾಲಿಸಿಕೊಂಡು ಬಂದಂತಹ ಅಧಿಕಾರಿ, ಅವರೇ ಡಾಕ್ಟರ್. ಮಾಯಣ್ಣ ಗೌಡರು. 06-2025 ನೇ ಸಾಲಿನ ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸುತ್ತಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ಅಧಿಕಾರಿ ಡಾ||ಮಾಯಣ್ಣ ಗೌಡರಿಗೆ.
ಸಿಟಿ ರೌಂಡ್ಸ್ ಪತ್ರಿಕೆ ಬಳಗದಿಂದ ಶುಭಾಶಯಗಳು..

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ