ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ. ಎಂ
ಶಿವಮೊಗ್ಗ: ಹೊಸನಗರ ಪಟ್ಟಣದ ಮಾರಿಗುಡ್ಡ ನಿವಾಸಿ ಹಾಗೂ ಪುರ ಪಂಚಾಯತ್ ನಲ್ಲಿ 35 ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದ ದಿ| ನಾಗರಾಜ ಶೆಟ್ಟಿ ಮತ್ತು ವನಮಾಲ ಅವರ ಮೊಮ್ಮಗಳಾದ, ಹಾಗೂ ಹೊಸನಗರದ ಶ್ರೀ ರಾಮಕೃಷ್ಣ ವಿಧ್ಯಾಲಯದಲ್ಲಿ 7 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಶ್ರೀಮತಿ ವಿಜಯ ಗಣೇಶ್ ಇವರ ಮಗಳು ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿಯಾದ S R. ನಾಗೇಶ್ ಕುಮಾರ್, ಶೈಲಾ ನಾಗೇಶ್ ರವರ ಮುದ್ದು ಮೊಮ್ಮಗಳಾದ 2 ವರ್ಷ 2 ತಿಂಗಳ ಮುದ್ದು ಪುಟಾಣಿ ನವಮಿ S R. ಐಬಿಆರ್ ಸಾಧಕಿ.

ನವಮಿ ಎಸ್. ಆರ್.ವಾಹನಗಳ ಹೆಸರುಗಳನ್ನು, 8 ಬಣ್ಣಗಳ ಗುರುತಿಸುವಿಕೆ,14 ದೇಶೀಯ ಮತ್ತು 16 ಕಾಡು ಪ್ರಾಣಿಗಳನ್ನು ಗುರುತಿಸುವಿಕೆ, ವಾರಗಳು ,ವರ್ಷ ಮತ್ತು ದಿನಗಳು, ತಿಂಗಳುಗಳನ್ನು ಹೆಸರಿಸುವುದು.
14 ವಿವಿಧ ವಿಷಯಗಳನ್ನು ಸರಾಗವಾಗಿ ಹೇಳುವುದರ ಮೂಲಕ 2 ವರ್ಷ ಮತ್ತು 2 ತಿಂಗಳ, ನವಮಿ ಎಸ್. ಆರ್ 2025 ರ INDIA BOOK OF RECORD ನಲ್ಲಿ ಸೇರ್ಪಡೆಯಾಗುವುದರ ಮೂಲಕ ಸಾಧನೆ ಮಾಡಿರುವ, ನವಮಿ ಎಸ್. ಆರ್ ಹೆತ್ತ ತಂದೆ ತಾಯಿಗೆ ಹಾಗೂ ಕರ್ನಾಟಕ ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತಂದಿರುತ್ತಾಳೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ