ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ಬಾಗಲಕೋಟೆ: ಮಕ್ಕಳು ಪರೀಕ್ಷೆಯಲ್ಲಿ ಫೇಲಾದರೆ ಅಂತ ಮಕ್ಕಳನ್ನು ತಾಯಿ ತಂದೆ ಹೀಯಾಳಿಸುವುದು ಅಥವಾ ಹೊಡೆಯುವುದು ಈ ರೀತಿಯಾಗಿ ಮಕ್ಕಳನ್ನು ಎದುರಿಸುವಂತ ಕೆಲಸವನ್ನು ಮಾಡುತ್ತಾರೆ. ಆದರೆ ಇಲ್ಲೊಂದು ಕುಟುಂಬ ತನ್ನ ಮಗ 10ನೇ ತರಗತಿಯ ಪರೀಕ್ಷೆಯಲ್ಲಿ ಅದು ಆರು ವಿಷಯಕ್ಕೂ ಆರು ವಿಷಯವೂ ಫೇಲ್ ಆಗಿದ್ದರು, ಅವನನ್ನು ಯಾವುದೇ ರೀತಿಯ ಮಾನಸಿಕವಾಗಿ ದೈಹಿಕವಾಗಿ ಹಿಂಸಿಸದೆ ಒಡೆದು ಬಡಿದು ಮಾಡದೆ ಆತ್ಮಸ್ಥೈರ್ಯವನ್ನು ತುಂಬಿ ಮಗನನ್ನು ಸಿಹಿ ತಿನಿಸುವ ಮೂಲಕ, ಸಿಹಿ ತಿನಿಸುವ ಚಿತ್ರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಪರೀಕ್ಷೆಯಲ್ಲಿ ಫೇಲಾದಂತಹ ಮಕ್ಕಳಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುವಂತೆ ಹೇಳುವ ರೀತಿಯಲ್ಲಿ ತಮ್ಮ ಮಗನನ್ನು ಮುಂದಿನ ದಿನಗಳಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣವಾಗುವಂತೆ ಉರಿದುಂಬಿಸಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲಾದರೆ ಆತ್ಮಹತ್ಯೆ ಮಾಡಿಕೊಳ್ಳುವಂತ ಅನೇಕ ಘಟನೆಗಳು ನಡೆದಿವೆ ಜೀವನದಲ್ಲಿ ಫೇಲಾದರೆ ಪಾಸ್ ಆಗಲು ಸಮಯವಿರುತ್ತದೆ ಆದರೆ ಆತ್ಮಹತ್ಯೆ ಎಂಬ ನಿರ್ಧಾರದ ಮೂಲಕ ಪ್ರಾಣ ಕಳೆದುಕೊಂಡರೆ ಪ್ರಾಣ ಹೋಗುತ್ತದೇ ಹೊರತು ಇನ್ನೇನು ಸಾಧನೆ ಮಾಡಿದಂತಾಗುವುದಿಲ್ಲ.
ಬಾಗಲಕೋಟೆಯ ನವನಗರ ನಿವಾಸಿ ಅಭಿಷೇಕ್ ಯಲ್ಲಪ್ಪ ಚೋಳಚಗುಡ್ಡ ಎಂಬ ವಿದ್ಯಾರ್ಥಿ 10ನೇ ತರಗತಿಯಲ್ಲಿ ಫೇಲಾಗಿದ್ದು, 625ಕ್ಕೆ 200 ಅಂಕ ಪಡೆದು 32% ಪಡೆದಿದ್ದು, ಆರಕ್ಕೆ ಆರು ವಿಷಯ ಫೇಲ್ ಆಗಿದ್ದಾನೆ ಈತನ ಕುಟುಂಬದ ಸದ್ಯಸರು ಈತನಿಗೆ ಯಾವುದೇ ರೀತಿಯ ಮಾನಸಿಕ ಹಿಂಸೆ ನೀಡದೆ ಆತ್ಮಸ್ಥೈರ್ಯ ತುಂಬುವ ಮೂಲಕ ಈತನನ್ನು ಮುತ್ತಿಟ್ಟು ಸಿಹಿ ತಿನಿಸುವ ಮೂಲಕ ಪರೀಕ್ಷೆಯನ್ನು ಮುಂದಿನ ದಿನಗಳಲ್ಲಿ ಉತ್ತಮ ರೀತಿಯಲ್ಲಿ ಬರೆಯುವಂತೆ ಪ್ರೋತ್ಸಾಹಿಸಿದ್ದಾರೆ.
ಈತ ಬಾಗಲಕೋಟೆ ಬಸವೇಶ್ವರ ಇಂಗ್ಲೀಷ್ ಮೀಡಿಯಮ್ ಹೈಸ್ಕೂಲ್ ನಲ್ಲಿ ಓದುತ್ತಿದ್ದ ಎನ್ನಲಾಗಿದೆ. ಈತ ಹದಿನೈದು ತಿಂಗಳ ಮಗುವಾಗಿದ್ದಾಗ ಎರಡು ಪಾದ ಸುಟ್ಟು ನೆನಪಿನ ಶಕ್ತಿ ಕಳೆದುಕೊಂಡಿರುವ ಅಭಿಷೇಕ, ಇದೇ ಹಿನ್ನೆಲೆ ಉತ್ತರ ನೆನಪಿಟ್ಟುಕೊಂಡು ಬರೆಯಲು ವಿಫಲವಾಗಿದ್ದಾನೆ ಅದೇ ಕಾರಣದಿಂದ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾನೆ ಎಂದು ಅಭಿಷೇಕ್ ತಂದೆ ತಾಯಿ ತಿಳಿಸಿದ್ದಾರೆ. ಜೀವನದಲ್ಲಿ ಪರೀಕ್ಷೆಯೇ ಹೊರತು ಪರೀಕ್ಷೆಯೇ ಜೀವನದ ಕೊನೆಯಲ್ಲ ಎನ್ನುವ ಸಂದೇಶವನ್ನು ತಮ್ಮ ಮಗನಿಗೆ ತಿಳಿಸಿದ ಬಾಗಲಕೋಟೆಯ ನವನಗರ ನಿವಾಸದ ಕುಟುಂಬ ನಿರ್ಧಾರವನ್ನು ಅನೇಕರು ಶ್ಲಾಘಿಸಿದ್ದಾರೆ.

More Stories
ಸಿಎಲ್ 2 ಮಧ್ಯದಂಗಡಿಗಳಿಗೆ ನಿಯಮಗಳೇ ಇಲ್ಲ : ಮಾಂಸಾಹಾರಿ ಹೋಟೆಲ್ಗಳಲ್ಲಿ ಮಧ್ಯ ಮಾರಾಟಕ್ಕೆ ಕಾನೂನಿನ ಭಯವೇ ಇಲ್ಲ … ಪ್ರತಿನಿತ್ಯ ಅಪಘಾತಗಳೆ …. ಸಾರ್ವಜನಿಕರ ಜೀವಗಳಿಗೆ ಬೆಲೆಯೇ ಇಲ್ಲ …
ಯುವ ಪ್ರೇಮಿಗಳೇ ಇವನ ಟಾರ್ಗೆಟ್…. ಮಂಜುನಾಥನಾಯ್ಕ ಇವನ ಹಿಂದಿದೆಯೇ ದೊಡ್ಡ ರಾಬರಿ ಗ್ಯಾಂಗ್ …?
ಜನಪ್ರತಿನಿಧಿಗಳ ಕರೆಗೆ ಅಧಿಕಾರಿಗಳು ಡೋಂಟ್ ಕೇರ್ :ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳ ಆಕ್ರೋಶ..!!