ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ
ಶಿವಮೊಗ್ಗ : ಭಾರತ ಸರ್ಕಾರ, ಯುವ ವ್ಯವಹಾರ ಮ್ತತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಶಿವಮೊಗ್ಗ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಮತ್ತು ಇನ್ನೋವೆಟರ್ ಯೂತ್ ಕ್ಲಬ್, ಶಿವಮೊಗ್ಗ ಇವರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ದಿನಾಂಕ 23.03.2025 ರ ಭಾನುವಾರದಂದು ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಿದ್ದು 15 ರಿಂದ 29 ವರ್ಷದ ವಯೋಮಿತಿವುಳ್ಳವರು ಭಾಗವಹಿಸಬಹುದಾಗಿದೆ. ಗುಂಪು ವಿಭಾಗದಲ್ಲಿ ವಾಲಿಬಾಲ್ ಸ್ಪರ್ಧೆ (ಪುರುಷರಿಗೆ), ಖೋ,ಖೋ(ಮಹಿಳೆಯರಿಗೆ) ಹಾಗೂ ವೈಯಕ್ತಿಕ ವಿಭಾಗದಲ್ಲಿ ಮಹಿಳೆಯರಿಗಾಗಿ 100ಮೀ. ಓಟ ಮತ್ತು ಗುಂಡು ಎಸೆತ, ಪುರುಷರಿಗಾಗಿ ಬ್ಯಾಟ್ಮಿಟನ್, ಗುಂಡು ಎಸೆತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಲು ಆಸಕ್ತ ಸ್ಪರ್ಧಿಗಳು ದಿನಾಂಕ 21.03.2025 ರೊಳಗೆ ನಿಮ್ಮ ಹೆಸರನ್ನು ಈ ಕೆಳಕಂಡ ಮೊಬೈಲ್ ನಂ. 9961332968 ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳತಕ್ಕದ್ದು ಎಂದು ಹೇಳಿದ್ದಾರೆ.
ಕ್ರೀಡಾಕೂಟದ ದಿ: 23.03.2025 ರಂದು ಬೆಳಿಗ್ಗೆ 09.30 ರ ಒಳಗೆ ನಿಗದಿತ ಸ್ಥಳದಲ್ಲಿ ಹಾಜರಿರಬೇಕೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ.: 9961332968 ಸಂಪರ್ಕಿಸುವುದು ಎಂದು ತಿಳಿಸಿದ್ದಾರೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ