ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ
ಶಿವಮೊಗ್ಗ : ಸಾರ್ವಜನಿಕರು ತಮ್ಮ ಕೆಲಸದ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಭೇಟಿ ಮಾಡುವಂತಹ ಸಾರ್ವಜನಿಕರು ತಮ್ಮ ಕೆಲಸದ ನಿಮಿತ್ತ ಸರ್ಕಾರಿ ಕಚೇರಿಗಳಲ್ಲಿ ಕಾಯುವಂತಹ ಸಂದರ್ಭಗಳು ಬರುತ್ತವೆ ಅಂತ ಸಮಯದಲ್ಲಿ ಸಾರ್ವಜನಿಕರು ಕುಳಿತು ಕೊಳ್ಳಲು ಆಸನದ ವ್ಯವಸ್ಥೆ ಎಲ್ಲಾ ಕಛೇರಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.ಆದರೆ. ಅನೇಕ ಸರ್ಕಾರಿ ಕಚೇರಿಗಳಲ್ಲಿ ಫ್ಯಾನ್ ಗಾಳಿಯ ವ್ಯವಸ್ಥೆ ಮಾಡಲಾಗಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸಾರ್ವಜನಿಕ ಎಲ್ಲಾ ರೀತಿಯ ತೆರಿಗೆಗಳನ್ನು ಕಟ್ಟುವಂತಹ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕರ ಆಸ್ತಿಗಳಾದಂತಹ ಸರ್ಕಾರಿ ಕಚೇರಿಗಳಲ್ಲಿ, ಸಾರ್ವಜನಿಕರು ಕಟ್ಟುವಂತಹ ತೆರಿಗೆ ಗಳಿಂದ ನಡೆಸುತ್ತಿರುವ ಸರ್ಕಾರಿ ಕಚೇರಿಗಳು. ಕಚೇರಿಗಳಿಗೆ ಬೇಕಾದಂತಹ ಅನೇಕ ರೀತಿಯ ಎಸಿ, ಫ್ಯಾನ್, ಕೂರಲು ಆರಾಮದಾಯಕ ಆಸನಗಳು ಹಾಗೂ ಇನ್ನಿತರ ಉತ್ತಮ ವ್ಯವಸ್ಥೆಯನ್ನು ಸರ್ಕಾರಿ ನೌಕರರಿಗೆ ಮಾಡಿಕೊಡುತ್ತಿರುವುದು ಸಾರ್ವಜನಿಕರು.
ಕಟ್ಟುತ್ತಿರುವಂತ ತೆರಿಗೆಯ ಹಣದಿಂದ. ಆದರೆ ಅದೇ ಸರ್ಕಾರಿ ಕಚೇರಿಗಳಿಗೆ ಬರುವಂತಹ ಸಾರ್ವಜನಿಕರಿಗೆ ಯಾವುದೇ ರೀತಿಯ ಉತ್ತಮ ವ್ಯವಸ್ಥೆ ಹಲವು ಕಚೇರಿಗಳಲ್ಲಿ ಕಾಣ ಸಿಗುತ್ತಿಲ್ಲ. ಇನ್ನು ಹಲವು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇರದ ಸಮಯದಲ್ಲಿ ಫ್ಯಾನ್ಗಳು ಹಾಗೂ ಲೈಟ್ಗಳನ್ನು ಹಾರಿಸದೆ ಗಂಟೆಗಟ್ಟಲೆ ಫ್ಯಾನ್ಗಳು ಸುತ್ತುತ್ತಿರುತ್ತವೆ. ಸರ್ಕಾರಿ ಕಚೇರಿಗಳಲ್ಲಿ ಕೆಲ ಅಧಿಕಾರಿಗಳು ಹಾಗೂ ಕೆಲಸಿಬ್ಬಂದಿಗಳು ಮಾಡುವ ತಪ್ಪನಿಂದ ವಿದ್ಯುತ್ ಪಾವತಿಯ ಹಣವನ್ನು ಸಾರ್ವಜನಿಕರ ತೆರಿಗೆ ಮೇಲೆಯೇ ಎರುತ್ತಾರೆ .ಈ ರೀತಿ ಅವ್ಯವಸ್ಥೆ ಶಿವಮೊಗ್ಗ ನಗರದ ಅನೇಕ ಸರ್ಕಾರಿ ಕಚೇರಿಗಳಲ್ಲಿ ಕಂಡುಬರುತ್ತಿದೆ. ಆದರಿಂದ ಜಿಲ್ಲಾಧಿಕಾರಿಗಳು, ಶಿವಮೊಗ್ಗ ನಗರದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವಂತಹ ಸಾರ್ವಜನಿಕರಿಗೆ ಬೇಕಾದಂತಹ ಸೌಕರ್ಯಗಳನ್ನು ಪರಿಶೀಲಿಸಿ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವಂತೆ ಸಾರ್ವಜನಿಕರ ದೂರು. ಸಾರ್ವಜನಿಕರ ಪರವಾಗಿ( ಸಿಟಿ ರೌಂಡ್ಸ್ ಪತ್ರಿಕೆಯ) ಬಳಗದಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ.

More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…