ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ
ಶಿವಮೊಗ್ಗ: ದಿ: 11-03-2025. ಆರ್ ಆಂಜನೇಯ ಸಳಾಂಕೆ ಅವರಿಗೆ, ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಡಾ. ಎಸ್ ನಾರಾಯಣ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿವಮೊಗ್ಗದ ಆಂಜನೇಯ ಸಳಾಂಕೆ ಸೇರಿದಂತೆ ಐವರಿಗೆ ಸನ್ಮಾನಿಸಿ ಗೌರವಿಸಲಾಗಿದೆ.
ಆಂಜನೇಯ ಸಳಂಕಿ ಅವರು 1986ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು ಅವರ ಪೋಷಕರು ತಂದೆ ದಿವಂಗತ ಶ್ರೀ ರಾಮದಾಸ್ ಮತ್ತು ತಾಯಿ ರೂಪಮ್ಮ ಆಗಿದ್ದಾರೆ. ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರ್ದಾರ್ ವಲ್ಲಭಾಯಿ ಪಟೇಲ್ ಪ್ರೌಢಶಾಲೆಯಲ್ಲಿ ಪೂರೈಸಿದ್ದಾರೆ.ಆಂಜನೇಯ ಸಳಂಕಿ, ಘೀಸಡಿ ಬುಡಕಟ್ಟು ಕಮ್ಮಾರ ಜನಾಂಗಕ್ಕೆ ಸೇರಿದ ಇವರು, ಅವರ ಅಜ್ಜ, ತಂದೆ ಹಾಗೂ ಕುಟುಂಬದ ಎಲ್ಲ ಸದಸ್ಯರು ಕುಲುಮೆ ಕಾರ್ಮಿಕರಾಗಿದ್ದರು. ಬಡತನ ಕುಟುಂಬದಲ್ಲಿ ಬೆಳೆದು ಸಮಾಜಕ್ಕಾಗಿ ಸಮಾಜದ ಏಳಿಗೆಗಾಗಿ ಶ್ರಮಿಸುವ ಮೂಲಕ ಯಶಸ್ವಿಯಾಗಿದ್ದಾರೆ ಆಂಜನೇಯ ಸಳಾಂಕೆ.
ಆಂಜನೇಯ ಸಳಾಂಕೆ ,AI Kannada Varta” ಎಂಬ ಯೂಟ್ಯೂಬ್ ಚಾನೆಲ್ ಸ್ಥಾಪಿಸಿದ್ದು, ಈ ಚಾನೆಲ್ನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಿದ್ದಾರೆ. ಸಂಪಾದಕರಾಗಿ ಅತ್ಯುತ್ತಮ ಸಾಧನೆ ಮಾಡಿದ ಆಂಜನೇಯ ಸಳಾಂಕೆಗೆ ಈ ಪ್ರಶಸ್ತಿ ಲಭ್ಯವಾಗಿದೆ.
ಮಹಾರಾಣಾ ಪ್ರತಾಪ್ ಅವರ ಹುಟ್ಟುಹಬ್ಬವನ್ನು ಪ್ರತಿವರ್ಷ ಶಿವಮೊಗ್ಗ ನಗರದಲ್ಲಿ ವಿಜೃಂಭಣೆಯಿಂದ ಆಚರಿಸುವ ಮೂಲಕ ಜನಮನ ಸೆಳೆದಿರುವ ಆಂಜನೇಯರವರು ರಾಜ್ಯ ಘಿಸಾಡಿ ಕುಲುಮೆ ಕಾರ್ಮಿಕರ ಕಮ್ಮಾರ್ ಸಂಘದಲ್ಲಿದ್ದಾರೆ. ಕಮ್ಮಾರ ಬುಡಕಟ್ಟು ಸಮುದಾಯದ ಆಂಜನೇಯರವರು ಮೀಸಲಾತಿ ನೀಡಬೇಕೆಂದು ಇವರು ಅಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜಕ್ಕಾಗಿ ಹಲವಾರು ರೀತಿಯ ಕೊಡುಗೆ ನೀಡುವಲ್ಲಿ ಯಶಸ್ಸು ಸಿಗಲೆಂದು ಹಾಗೂ ರಾಷ್ಟ್ರ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಲೆಂದು ಆಂಜನೇಯ ಸಳಾಂಕೆ ರವರಿಗೆ ಸಿಟಿ ರೌಂಡ್ಸ್ ಪತ್ರಿಕೆಯ ಬಳಗದಿಂದ ಶುಭಾಶಯಗಳು.

More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…