ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ಶಿವಮೊಗ್ಗ: ದಿನಾಂಕ:06-03-2025, ರಂಗಾಯಣ ಶಿವಮೊಗ್ಗ ಹಾಗೂ ನಮ್ಮ ಹಳ್ಳಿ ಥಿಯೇಟರ್ ಇವರ ಸಹಯೋಗದಲ್ಲಿ ಮಾ.8 ರಿಂದ 9 ರವೆಗೆ ಸಂಜೆ 6.30 ಕ್ಕೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಎರಡು ದಿನಗಳ ರಂಗೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಹೆಗ್ಗೋಡು ರಂಗಕರ್ಮಿಯಾದ ಎಸ್. ಹೆಚ್ ಫಣಿಯಮ್ಮ ಕಾರ್ಯಕ್ರಮವನ್ನು ಉದ್ಘಾಟಿಸುವರು. ರಂಗಾಯಣ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ಅಧ್ಯಕ್ಷತೆ ವಹಿಸಲಿದ್ದು, ಪೇಸ್ ಯುಎಂಪಿಯು ಕಾಲೇಜಿನ ಹೆಚ್. ಎಲ್. ಡಾ.ಮೈತ್ರೀಯಿ ಆಗಮಿಸುವರು ಎಂದು ತಿಳಿಸಲಾಗಿದೆ.
ಮಾ.8 ರ ಸಂಜೆ 6.30 ಕ್ಕೆ ಬೈಂದೂರಿನ ಸುರಭಿ ತಂಡದಿAದ ಡಾ.ಕೆ.ಶಿವರಾಮ ಕಾರಂತರ ರಚನೆಯ ಗಣೇಶ್ ಮಂದಾರ್ತಿ ನಿರ್ದೇಶನದ “ಚೋಮನ ದುಡಿ” ಹಾಗೂ ಮಾ.9 ರ ಸಂಜೆ 6.30ಕ್ಕೆ ಬೆಂಗಳೂರಿನ ರಂಗಪಯಣ ತಂಡದಿಂದ ಡಾ.ಗಿರೀಶ್ ಕಾರ್ನಾಡ್ ರಚನೆಯ ರಾಜಗುರು ವಿನ್ಯಾಸ ಮತ್ತು ನಿರ್ದೇಶನದ “ಒಂದಾನೊಂದು ಕಾಲದಲ್ಲಿ” ನಾಟಕ ಪ್ರದರ್ಶನ ನಡೆಯಲಿದ್ದು, ಟಿಕೆಟ್ ದರ ಪ್ರತಿ ನಾಟಕಕ್ಕೆ ಒಬ್ಬರಿಗೆ ರೂ.30 ಹಾಗೂ ಎರಡು ನಾಟಕಕ್ಕೆ ಸೇರಿ ರೂ. 50 ನಿಗದಿ ಪಡಿಸಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ ತಿಳಿಸಿದ್ದಾರೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ