City Rounds News

Kannada News Website

ಗೋಲ್ ಗುಪ್ಪ ಪಾನಿಪುರಿಯಲ್ಲಿ ಹುಳುಗಳು ಪತ್ತೆ..!

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್ 

ಅಣ್ಣಪ್ಪ. ಎಂ 

ಶಿವಮೊಗ್ಗ: 19-02-2025 ರಂದು ಈದಿನ ನಗರದ ಅಲ್ಲಮಪ್ರಭು ಪಾರ್ಕ್ ಮುಂಭಾಗದಲ್ಲಿ ಪುಟ್ ಪಾತ್ ನಲ್ಲಿ ವ್ಯಾಪಾರಿಯ ಪಾನಿಪುರಿ ಗೋಲ್ ಗುಪ್ಪ ಮಾರಾಟ ಮಾಡುವನ ಹತ್ತಿರ ಗ್ರಾಹಕ ಪಾನಿಪುರಿ ತಿನ್ನುವಾಗ ಗೋಲ್ ಗುಪ್ಪ ಪಾನಿಪುರಿಯಲ್ಲಿ ಹುಳುಗಳು ಪತ್ತೆಯಾಗಿದೆ.ಈ ವಿಚಾರವಾಗಿ ಗೋಲ್ ಗುಪ್ಪ ಪಾನಿಪುರಿಯ ವ್ಯಾಪಾರಿ ಹಾಗೂ ಗ್ರಾಹಕರ ನಡುವೆ ಈ ವಿಚಾರದಲ್ಲಿ ಗಲಾಟೆ ನಡೆದಿದೆ.ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ನಗರದಲ್ಲಿ ಹಲವಾರು ರೀತಿಯ ಫುಟ್ಪಾತ್ ನಲ್ಲಿ ವ್ಯಾಪಾರ ಮಾಡುತ್ತಿರುವಂತ ಫಾಸ್ಟ್ ಫುಡ್ಗಳ ವ್ಯಾಪಾರಸ್ಥರ ಮೇಲೆ ಹೆಲ್ತ್ ಇನ್ಸ್ಪೆಕ್ಟರ್ಗಳಾಗಲಿ ಅಥವಾ ಆಹಾರ ಸುರಕ್ಷಿತ ಅಧಿಕಾರಿಗಳಾಗಲಿ, ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. ಕಾರಣ ನಗರದಲ್ಲಿ ಅನೇಕ ಸ್ಥಳಗಳಲ್ಲಿ ರಸ್ತೆ ಬದಿಯಲ್ಲಿ ಮಾರಾಟ ಮಾಡುವಂತಹ ಫಾಸ್ಟ್ ಫುಡ್ ಅಂಗಡಿಗಳಲ್ಲಿ ಈಗಾಗಲೇ ಆದೇಶ ಹೊರಡಿಸಿದಂತೆ ಬಣ್ಣ ರಹಿತ ಆಹಾರಗಳಲ್ಲೂ ಹಾಗೂ ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂಬ ಮಾಹಿತಿಯನ್ನು ಕಲೆಹಾಕಲು ಆಹಾರ ಸುರಕ್ಷತೆ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ಗಳಾಗಲಿ ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲವೆಂಬ ದೂರು ಸಾರ್ವಜಕರಿಂದ ಕೇಳು ಬರುತ್ತಿದೆ. ಸರ್ಕಾರ ಸಾರ್ವಜನಿಕರ ತೆರಿಗೆಯಿಂದ ಆಹಾರ ಸುರಕ್ಷತೆ ಅಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆಯ ಹೆಲ್ತ್ ಇನ್ಸ್ಪೆಕ್ಟರ್ ಗಳಿಗೆ ಸಂಬಳ, ಓಡಾಡಲು ವಾಹನ ಹೀಗೆ ಅನೇಕ ರೀತಿಯ ಸವಲತ್ತುಗಳನ್ನು ನೀಡಿ ತಮ್ಮ ಕರ್ತವ್ಯವನ್ನು ಪಾಲಿಸುವಂತೆ ಸೂಚಿಸಿದ್ದರು. ಈ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ಪಾಲಿಸುತ್ತಿಲ್ಲವೆಂಬ ದೂರುಗಳು ಅನೇಕ ಬಾರಿ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಅಧಿಕಾರಿಗಳು ರಸ್ತೆ ಬದಿಯಲ್ಲಿ ಮಾರಾಟ ಮಾಡುವಂತಹ ಫಾಸ್ಟ್ ಫುಡ್ ಹಾಗೂ ಖಾದ್ಯಗಳ ಮಾರಾಟಗಾರರನ್ನು ಆಹಾರ ಸುರಕ್ಷತೆಯ ಬಗ್ಗೆ ತಿಳಿ ಪಡಿಸಿ ಗುಣಮಟ್ಟವನ್ನು ಪರೀಕ್ಷಿಸಿ ತಮ್ಮ ಕರ್ತವ್ಯವನ್ನು ನಿಯಮಾನುಸಾರ ಪಾಲಿಸುವಂತೆ ಸಾರ್ವಜನಿಕರಿಂದ ದೂರು.