ಶಿವಮೊಗ್ಗ: ಜನನ ಮತ್ತು ಮರಣ ಪ್ರಮಾಣ ಪತ್ರ ದರ ಹೆಚ್ಚಿಸಿದ ಸರ್ಕಾರ. ಈ ಹಿಂದೆ ರಾಜ್ಯ ಸರ್ಕಾರ ನಿಗದಿ ಪಡಿಸಿದ ದರ ಜನನ ಮತ್ತು ಪ್ರಮಾಣ ಪತ್ರ ಒಂದಕ್ಕೆ ₹ 5 ರೂಪಾಯಿ ಪಾವತಿಸಿ ಪಡೆಯಬೇಕಿತ್ತು. ಜನನ ಮತ್ತು ಮರಣ ಪ್ರಮಾಣ ಪತ್ರವು ಪ್ರತಿಯೊಬ್ಬ ಸಾರ್ವಜನಿಕರಿಗೂ ಅವಶ್ಯಕತೆ ಆದಂತ ದಾಖಲೆಯಾಗಿದ್ದು ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಜನಿಸಿದ ಮಗುವಿನ ಶಾಲಾ ದಾಖಲಾತೆಗೆ ಹಾಗೂ ಇನ್ನಿತರ ಸರ್ಕಾರಿ ಸೌಲಭ್ಯಗಳಿಗೆ ಒದಗಿಸಲು ಕಡ್ಡಾಯವಾಗಿ ಬೇಕಾಗಿದ್ದು. ಒಂದು ಪ್ರತಿಗೆ ₹5 ರಂತೆ 10 ಪ್ರತಿಗಳನ್ನು ಪಡೆಯಲು ₹ 50 ರೂಪಾಯಿಗಳನ್ನು ನೀಡಲಾಗುತ್ತಿತ್ತು. ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳ ತಿದ್ದುಪಡಿ 2024ರಲ್ಲಿ ಪರಿಷ್ಕರಣೆ ಮಾಡಲಾಗಿದ್ದು ಈಚೆಗೆ ಶುಲ್ಕವನ್ನು ₹ 50 ರೂಪಾಯಿಗೆ ಹೆಚ್ಚಿಸಲಾಗಿದೆ. ಹಿಂದೆ ಜನನ ಮತ್ತು ಪ್ರಮಾಣ ಪತ್ರ ಒಂದಕ್ಕೆ ₹ 5 ರೂ ಶುಲ್ಕ ನೀಡಿ ಪಡೆಯಲಾಗುತ್ತಿತ್ತು. ಆದರೆ ಸರ್ಕಾರ ಶುಲ್ಕವನ್ನು 10 ಪಟ್ಟು ಹೆಚ್ಚಿಸಿದ್ದು. ಜನನ ಮತ್ತು ಮರಣ ಪ್ರಮಾಣ ಪತ್ರದ ಒಂದು ಪ್ರತಿಗೆ ರೂ.50 ರಂತೆ ಶುಲ್ಕವನ್ನು ಹೆಚ್ಚಿಸಿದ ಸರ್ಕಾರದ ಈ ಆದೇಶವನ್ನು ಸಾರ್ವಜನಿಕ ವಲಯದಲ್ಲಿ ಖಂಡಿಸಲಾಗುತ್ತಿದೆ. ಸರ್ಕಾರದ ಈ ರೀತಿಯ ದರ ಹೆಚ್ಚಳದಿಂದ ಬಡವರ್ಗದವರ ಮೇಲೆ ಬರೆ ಎಳೆದಂತಾಗಿದೆ ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ನಕಲಿ ಔಷಧ ಅಡ್ಡೆಗಳ ಮೇಲೆ ಇ ಡಿ ದಾಳಿ!!
ಟ್ರಾಫಿಕ್ ಚಲನ್ಗಳಿಗೆ ಶೇ. 50 ರಿಯಾಯಿತಿ: ದಂಡ ಪಾವತಿಗೆ ಅವಕಾಶ!