ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ
ಶಿವಮೊಗ್ಗ: ದಿನಾಂಕಃ 11-02-2025 ರಂದು ಇಂದು ಬೆಳಗ್ಗೆ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾ ನಗರ , ಮಾರ್ನಾಮಿ ಬೈಲು , ಕಾಮಾಕ್ಷಿ ಬೀದಿ ಯಲ್ಲಿ, ಹರೀಶ್ ಕೆ ಪಾಟೀಲ್, ಪೊಲೀಸ್ ನಿರೀಕ್ಷಕರು, ಕೋಟೆ ಪೊಲೀಸ್ ಠಾಣೆ ರವರು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರ ದಲ್ಲಿ, ಚಂದ್ರಕಲಾ, ಪೊಲೀಸ್ ನಿರೀಕ್ಷಕರು, ವಿನೋಬನಗರ ಪೊಲೀಸ್ ಠಾಣೆ ರವರು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಶಿಪುರ ದಲ್ಲಿ, ಸಿದ್ದೇಗೌಡ, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ ರವರು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಗಂಗೂರು , ಬಸವನಗುಡಿ ಯಲ್ಲಿ ಗುರುರಾಜ್ ಕೆ ಟಿ, ಪೊಲೀಸ್ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ರವರು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಿಶೆಟ್ಟಿಕೊಪ್ಪ, ಚಾಲುಕ್ಯನಗರ ದಲ್ಲಿ, ಸತ್ಯನಾರಾಯಣ,ಪೊಲೀಸ್ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ರವರು ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ಬಡಾವಣೆ, ಗುರುಪುರ ಸೇರಿದಂತೆ ಒಟ್ಟು 09 ಕಡೆಗಳಲ್ಲಿ ದಾಳಿ ನಡೆಸಿ, ಒಟ್ಟು 39 ಲಕ್ಷ ನಗದು, 24 ಮೊಬೈಲ್, 02 ಲ್ಯಾಪ್ ಟಾಪ್, 72 ಚೆಕ್ ಗಳು, 19 ಆರ್ಸಿ ಬುಕ್ ಗಳು, 07 ವೆಹಿಕಲ್ ಬಾಂಡ್, 02 ಫಾರ್ಮ್ ನಂ 29, 30 ಮತ್ತು ಅಗ್ರಿಮೆಂಟ್ ಕಾಪಿ , ಪಾಸ್ ಬುಕ್, ಸೇಲ್ ರೀಡ್, ಪಹಣಿ, 29 ಬೈಕ್ ಗಳು ಮತ್ತು 2 ಕಾರುಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ಒಟ್ಟು 09 ಆರೋಪಿತರ ವಿರುದ್ಧ ಒಟ್ಟು 09 ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮಿಥುನ್ ಕುಮಾರ ಜಿ ಕೆ, ಐಪಿಎಸ್, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2, ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಮತ್ತು ಸಂಜೀವ್ ಕುಮಾರ್ ಟಿ. ಪೊಲೀಸ್ ಉಪಾಧೀಕ್ಷಕರು, ಮತ್ತು ಕೃಷ್ಣ ಮೂರ್ತಿ ಪೊಲೀಸ್ ಉಪಾಧಿಕ್ಷಕರು, ಸಿಇಎನ್ ಪೊಲೀಸ್ ಠಾಣೆ ರವರ ಮೇಲ್ವಿಚಾರಣೆಯಲ್ಲಿ, ರವಿ ಪಾಟೀಲ್, ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ಪೊಲೀಸ್ ಠಾಣೆ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
More Stories
ವಯೋಸಹಜ ದೌರ್ಬಲ್ಯಗಳಿಂದ ಮುಕ್ತರಾಗಲು ಯೋಗಭ್ಯಾಸ ಸಹಕಾರಿ : ಪ್ರಭುಲಿಂಗ ಕವಳಿಕಟ್ಟಿ
ಸೀಸದಿಂದ ಮಕ್ಕಳ ಮೆದುಳಿಗೆ ಹಾನಿ:ಡಾ.ತುಪ್ಪಿಲ್ ವೆಂಕಟೇಶ್!! ಕುರಿ ಮತ್ತು ಮೇಕೆ ಸಾಕಾಣಿಕೆ ಉಚಿತ ತರಬೇತಿ..!! ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ..!!.!!
ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ : (ಎಂ ಎಸ್ ಪಿ) ಜಾರಿಗೋಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಸರ್ಕಾರಕ್ಕೆ ಒತ್ತಾಯ..!!