City Rounds News

Kannada News Website

ಅಕ್ರಮ ಆಸ್ತಿ ಗಳಿಕೆ: ಬಿಲ್ ಕಲೆಕ್ಟರ್ ಗೆ ಜೈಲು ವಾಸ..!

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್ 
ಅಣ್ಣಪ್ಪ.ಎಂ

ಬೆಂಗಳೂರು:ಸರ್ಕಾರಿ ಸೇವಾವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆಂಬ ಖಚಿತ ಮಾಹಿತಿಯ ಆಧಾರದ ಮೇಲೆ ಚಿಕ್ಕಜಾಲ ಬಿಲ್ ಕಲೆಕ್ಟರ್ ಕೃಷ್ಣಪ್ಪ ಅವರಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50.20 ಲಕ್ಷ ದಂಡ ಮತ್ತು ದಂಡ ಕಟ್ಟಲು ವಿಫಲರಾದಲ್ಲಿ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಇನ್ಸ್‌ ಪೆಕ್ಟ‌ರ್ ಎಂ.ಜೆ. ದಯಾನಂದ್ ಅವರು ನೀಡಿದ ಆದಾಯ ವರದಿಯ ಆಧಾರದ ಮೇಲೆ, ಪ್ರಕರಣವನ್ನು ದಾಖಲಿಸಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಲೋಕಾಯುಕ್ತ ಪೊಲೀಸ್ ಉಪಾಧಿಕ್ಷಕರಾದ ವಿಜಯ್‌ ಕುಮಾರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಎನ್. ನವೀನ್ ಕುಮಾರ್ ಅವರು, ಆರೋಪಿತ ಕೃಷ್ಣಪ್ಪ ತನ್ನ ಹಾಗೂ ತನ್ನ ಕುಟುಂಬದವರ ಹೆಸರಿನಲ್ಲಿ ರೂ. 63,66,528 (400.78%) ಗಳಷ್ಟು ಹೆಚ್ಚುವರಿ ಆಸ್ತಿಯನ್ನು ಗಳಿಸಿರುವ ಬಗ್ಗೆ ಸಿಸಿಹೆಚ್-24 ಬೆಂಗಳೂರು ನಗರ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿ ವಿಚಾರಣೆ ನಡೆಸಲಾಗಿತ್ತು.

 

ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ಆರೋಪಿಯ ತನ್ನ ಹಾಗೂ ತನ್ನ ಕುಟುಂಬದವರ ಹೆಸರಿನಲ್ಲಿ ಅಕ್ರಮ ಆಸ್ತಿಯನ್ನು ಹೊಂದಿರುವುದು ವಿಚಾರಣೆಯಿಂದ ದೃಢಪಟ್ಟ ಕಾರಣ 2025 ರ ಜನವರಿ 27ರಂದು ತೀರ್ಪು ಪ್ರಕಟಿಸಿ, ಆರೋಪಿತರಿಗೆ 03 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ಮತ್ತು 50,20,000/-ರೂ ದಂಡ ಮತ್ತು ದಂಡ ಕಟ್ಟಲು ವಿಫಲರಾದಲ್ಲಿ 06 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನ್ಯಾಯಾಲಯ ತೀರ್ಪು ನೀಡಿದೆ ಎಂದು ಲೋಕಾಯುಕ್ತ ಎಸ್.ಪಿ ಪವನ್ ನೆಜ್ಜೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.