ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ. ಎಂ
ಶಿವಮೊಗ್ಗ: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆ. ಆರ್. ಎಸ್ ) ಪಕ್ಷವೂ ಕಳೆದ ಕೆಲವು ವರ್ಷಗಳಿಂದ ಸರಕಾರಿ ಶಾಲೆಗಳನ್ನ ಉಳಿಸಬೇಕು ಮತ್ತು ಬೆಳೆಸಬೇಕು ಅನ್ನೋ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿಯಾನ ನಡೆಸುತ್ತಾ ಬಂದಿದ್ದು ಶಿವಮೊಗ್ಗ ಜಿಲ್ಲೆಯ ಶಾಲೆಗಳ ಅಭಿಯಾನ ನಡೆಸಿ ಅಲ್ಲಿರುವ ನ್ಯೂನತೆ ಸಮಸ್ಯೆಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಬಿಇಓ ರವರಿಗೆ ಮನವಿ ಕೂಡ ಸಲ್ಲಿಸಿರುತ್ತಾರೆ.
ಈ ರೀತಿಯ ನಮ್ಮ ಅಭಿಯಾನ ನಡೆಸುವಾಗ ಶಿವಮೊಗ್ಗ ನಗರದ ತುಂಗಾ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆಗಳು ಗಮನಕ್ಕೆ ಬಂದಿರುತ್ತದೆ. ಅಲ್ಲಿನ ಒಬ್ಬ ಖಾಸಗಿ ವ್ಯಕ್ತಿಯಿಂದ ಆ ಶಾಲೆಯ ಜಾಗ ಒತ್ತುವರಿ ಹಾಗೂ ಶಾಲೆಯ ಶೌಚಾಲಯ ಕೆಡುವಿಕೆ ನಡೆದಿರುತ್ತದೆ ಆ ಸಂಬಂಧ ನಾವು ಸಂಬಂಧ ಪಟ್ಟ ಶಾಲಾ ಮುಖ್ಯ ಶಿಕ್ಷಕಿ ಮತ್ತು ಬಿ ಇ ಓ ಅವರನ್ನು ಪ್ರಶ್ನಿಸಿರುತ್ತೇವೆ ಆ ಸಮಯದಲ್ಲಿ ನಮಗೆ ತಿಳಿದು ಬಂದಿರುವ ವಿಷಯ ಏನೆಂದರೆ ಆ ಶಾಲೆಗೆ ಶಾಲೆಯ ಜಾಗದ ಯಾವುದೇ ದಾಖಲೆಗಳು ಇರುವುದಿಲ್ಲ ಮತ್ತು ಆ ಶಾಲೆಗೆ ಮೂಲಭೂತ ಸೌಕರ್ಯವಾಗಿ ಇರಬೇಕಾದ ಆಟದ ಮೈದಾನ ಕೂಡ ಇರುವುದಿಲ್ಲ ಇದು ಮಕ್ಕಳ ಮೂಲಭೂತ ಹಕ್ಕನ್ನು ನಿರ್ಲಕ್ಷಿಸಿದ್ದು ಮತ್ತು ಕಸಿದುಕೊಳ್ಳುವ ಪ್ರಯತ್ನವಾಗಿದೆ. ಆದ್ದರಿಂದ ಆ ಶಾಲೆಗೆ ತೊಂದರೆ ಉಂಟು ಮಾಡುತ್ತಿರುವ ಅದಿಕೃತ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಆ ಶಾಲೆಯ ಜಾಗಕ್ಕೆ ಬೇಕಾದ ಹದ್ದು ಬಸ್ತು ಈ ಖಾತ ದಾಖಲೆಗಳನ್ನು ದಾಖಲಿಸಿ ಕೊಡುವಂತೆ ಹಾಗೂ ಜಿಲ್ಲೆಯಲ್ಲಿ ಈ ರೀತಿಯ ಸಮಸ್ಯೆಗಳಿರುವ ಹಲವಾರು ಶಾಲೆಗಳ ಜಾಗವನ್ನು ಒತ್ತುವರಿ ಮಾಡಲಾಗಿದೆ. ಆದ್ದರಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ವಿಚಾರವಾಗಿ. ಮಾನ್ಯ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ರವರಿಗೆ ಕೆ.ಆರ್.ಎಸ್ ಪಕ್ಷದಿಂದ ಮನವಿ ನೀಡಲಾಯಿತು.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ