City Rounds News

Kannada News Website

ಅಡಿಕೆ ಕಳ್ಳರ ಬಂಧನ: ಲಕ್ಷಾಂತರ ಮೌಲ್ಯದ ಅಡಿಕೆ ವಶಕ್ಕೆ ಪಡೆದ, ಹೊಳೆಹೊನ್ನೂರು ಪೊಲೀಸರು..!

ಶಿವಮೊಗ್ಗ:ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ. ಎ

ಭಧ್ರಾವತಿ : ಶ್ರೀನಿವಾಸಪುರ ಗ್ರಾಮದ ನಿವಾಸಿ ರಮೇಶ ರವರು ತಮ್ಮ ಸಹೋದರನ ಮನೆಯಲ್ಲಿಟ್ಟಿದ್ದ ಅಡಿಕೆ ತುಂಬಿದ ಚೀಲಗಳನ್ನು 19-12-2024ರಂದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ರಮೇಶ ರವರು ಹೊಳೆಹೊನ್ನೂರು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು. ಪ್ರಕರಣದಲ್ಲಿ ಕಳುವಾದ ಅಡಿಕೆ ಹಾಗೂ ಆರೋಪಿತರ ಪತ್ತೆಗಾಗಿ ಶಿವಮೊಗ ಅಧೀಕ್ಷಕರಾದಂತಹ ಮಿಥುನ್ ಕುಮಾರ್ ಜಿ. ಕೆ, ರವರು , ಅನಿಲ್ ಕುಮಾರ್ ಎಸ್ ಭೂಮರೆಡ್ಡಿ, ಎ.ಜಿ. ಕಾರಿಯಪ್ಪರವರ ಮಾರ್ಗದರ್ಶನದಲ್ಲಿ, ನಾಗರಾಜ್ ಕೆ. ಆರ್.ಪೊಲೀಸ್ ಉಪಾಧೀಕ್ಷಕರು ಭದ್ರಾವತಿ ಉಪ ವಿಭಾಗರವರ ಮೇಲ್ವಿಚಾರಣೆಯಲ್ಲಿ ಲಕ್ಷ್ಮಿಪತಿ ಆರ್.ಎಲ್ ಪಿ.ಐ ಹೊಳೆಹೊನ್ನೂರು ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್ಐರವರುಗಳಾದ ರಮೇಶ, ಮಂಜುನಾಥ ಎಸ್ ಕುರಿ, ಕೃಷ್ಣನಾಯ್ಕ ಹಾಗೂ ಸಿಬ್ಬಂದಿಗಳಾದ ಹೆಚ್ಸಿ ಅಣ್ಣಪ್ಪ, ಪ್ರಕಾಶ ನಾಯ್ಕ, ಮಂಜುನಾಥ, ಪ್ರಸನ್ನ ಮತ್ತು ಪಿಸಿ ವಿಶ್ವನಾಥ ರವರುಗಳನ್ನು ಒಳಗೊಂಡ ತಂಡವನ್ನು ರಚಿಸಿಲಾದಂತಹ

ಸದರಿ ತನಿಖಾ ತಂಡವು ದಿನಾಂಕ : 11-01-2025 ರಂದು ಪ್ರಕರಣದ ಆರೋಪಿತರಾದ 1) ಸಾಜೀದ್ @ ಸಾಧಿಕ್, 25 ವರ್ಷ, ಪಾಲಿಶ್ ಕೆಲಸ, ಖಂಡೇರಾವ್ ಕೊಪ್ಪಲು, ಅವಲಕ್ಕಿ ಮಿಲ್ ಹತ್ತಿರ ಖಾಜಿ ಮೊಹಲ್ಲಾ ಭದ್ರಾವತಿ, 2) ಜಮೀರ್ ಶೇಖ್ @ಅಡ್ಡು, 24 ವರ್ಷ, ಫ್ಲೈವುಡ್ ಕೆಲಸ ಕೂಡ್ಲಿ ಶಿವಮೊಗ್ಗ ಮತ್ತು 3) ಮಹಮದ್ ಮುಹೀಬುಲ್ಲಾ, 23 ವರ್ಷ, ಪಾಲಿಶ್ ಕೆಲಸ, ಚನ್ನಗರಿ, ದಾವಣಗೆರೆ ಜಿಲ್ಲೆ ಇವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವರದಿಯಾದ 2023ನೇ ಸಾಲಿನ ಒಂದು ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ, 2024ನೇ ಸಾಲಿನ ಎರಡು ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಮತ್ತು ಒಂದು ಅಡಿಕೆ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು 04 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 3,00,000/- ರೂಗಳ 6 ಕ್ವಿಂಟಾಲ್ ಅಡಿಕೆ, ಅಂದಾಜು ಮೌಲ್ಯ 1,93,000/- ರೂಗಳ 03 ದ್ವಿ ಚಕ್ರ ವಾಹನಗಳು ಹಾಗೂ ಕೃತ್ಯ ಬಳಸಿದ ಅಂದಾಜು ಮೌಲ್ಯ 2,00,000/- ರೂಗಳ ಓಮಿನಿ ವಾಹನ ಸೇರಿದಂತೆ ಒಟ್ಟು 6,93,000/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು, ಮಾನ್ಯ ಪೊಲೀಸ್ ಅಧಿಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ ಎಂದು ತಿಳಿಸಿದರು.