City Rounds News

Kannada News Website

ನೂತನವಾಗಿ ಆರಂಭಗೊಂಡ ಶ್ರೀ ಮಾರುತಿ ಅಗ್ರಿ ಟೆಕ್ ಟ್ರಾಕ್ಟರ್ ಶೋರೂಮ್ ಉದ್ಘಾಟನೆಯನ್ನು  ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಶಿವಮೊಗ್ಗ ಜಿಲ್ಲೆಯ ಜನಪ್ರಿಯ ಸಂಸದರಾದ ಮಾನ್ಯ ಬಿ. ವೈ. ರಾಘವೇಂದ್ರ ರವರು..!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ.ಎಂ

 

ಶಿವಮೊಗ್ಗ: ದಿನಾಂಕ: 15-01-2025 ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್ ನಲ್ಲಿ, ಶ್ರೀ ಮಾರುತಿ ಅಗ್ರಿ ಟೆಕ್ ಟ್ರಾಕ್ಟರ್ ಶೋರೂಮ್ ನೂತನವಾಗಿ ಆರಂಭವಾಯಿತು. ಸೋಲಿಸ್ ಯಾನಮಾರ್ ಕಂಪನಿಯ ಟ್ರಾಕ್ಟರ್ ಗಳು ಜಪಾನೀಸ್ ತಂತ್ರಜ್ಞಾನದ ಅದ್ಭುತ ವಿನ್ಯಾಸದೊಂದಿಗೆ ಲೋಕಾರ್ಪಣೆಗೊಂಡಿದೆ. ರೈತರಿಗೆ ಅತ್ಯುತ್ತಮವಾದ ಹಾಗೂ ದೀರ್ಘ ಬಾಳಿಕೆಯ ಉತ್ತಮ ತಂತ್ರಜ್ಞಾನದಿಂದ ಕೂಡಿದಂತ ಟ್ಯಾಕ್ಟರ್ 5 ವರ್ಷ ವಾರಂಟಿ ಹಾಗೂ ಉತ್ತಮ ಗುಣಮಟ್ಟದೂದಿಂಗೆ ಶಿವಮೊಗ್ಗ ಜಿಲ್ಲಾಧ್ಯಂತ ರೈತರಿಗೆ ಪ್ರಸ್ತುತ ಪಡಿಸಿದ್ದಾರೆ. ಶ್ರೀ ಮಾರುತಿ ಅಗ್ರಿಟೆಕ್ ಶೋರೂಮ್ ನ ಮಾಲೀಕರಾದ, ಶ್ರೀಯುತ ಗಣೇಶ್ ಹಾಗೂ ಬಾಬು ರವರು ಶಿವಮೊಗ್ಗ ಜಿಲ್ಲೆಯ ರೈತರಿಗೆ ಕೃಷಿ ಹಾಗೂ ಇತರೇ ಚಟುವಟಿಕೆಯ ಸಲುವಾಗಿ ಅತ್ಯುತ್ತಮವಾದಂತಹ ಜಪಾನೀಸ್ ತಂತ್ರಜ್ಞಾನದ ಟ್ರಾಕ್ಟರ್ ಅನ್ನು ಪರಿಚಯಿಸುತ್ತಾ, ರೈತರಿಗೆ ಟ್ರಾಕ್ಟರ್ ಖರೀದಿಗಾಗಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸ್ನೇಹ ಮಯವಾಗಿ ಸೇವೆ ನೀಡಲು ಬದ್ಧರಾಗಿದ್ದಾರೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಜಿಲ್ಲಾ ಜನಪ್ರಿಯ ಸಂಸದರಾದ ಬಿ. ವೈ. ರಾಘವೇಂದ್ರ ಅವರು ಆಗಮಿಸಿ ಕಾರ್ಯಕ್ರಮದ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿ, ಶ್ರೀ ಮಾರುತಿ ಆಗ್ರೋ ಟೆಕ್ ಟ್ರ್ಯಾಕ್ಟರ್ ಶೋರೂಮ್ ಹಾಗೂ ಸೋಲಿಸ್ ಯಾನಮಾರ್ ಕಂಪನಿಯ ಟ್ರಾಕ್ಟರ್ ಜಪಾನೀಸ್ ತಂತ್ರಜ್ಞಾನದ ಹಾಗೂ ಗುಣಮಟ್ಟದ ವಿಚಾರವಾಗಿ ಟ್ರ್ಯಾಕ್ಟರ್ ಶೋರೂಮ್ ಉದ್ಘಾಟನೆಗೆ ಬಂದಂತಹ ಶಿವಮೊಗ್ಗ ಜಿಲ್ಲೆಯ ರೈತರಿಗೆ ಕೆಲವು ಮುಖ್ಯವಾದಂತಹ ಅಂಶಗಳನ್ನು ತಿಳಿಸುತ್ತಾ, ಕೃಷಿಯ ವಿಚಾರವಾಗಿ ಹಲವು ಸಲಹೆಗಳನ್ನು ರೈತರಿಗೆ ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದಂತ  ಮಾನ್ಯ ಸಂಸದರಾದ ಬಿ. ವೈ .ರಾಘವೇಂದ್ರ ಅವರಿಗೆ ಶ್ರೀ ಮಾರುತಿ ಅಗ್ರಿ ಟೆಕ್ ಟ್ರಾಕ್ಟರ್ ಶೋರೂಮ್ ನಾ  ಮಾಲೀಕರಾದ ಗಣೇಶ್ ರವರು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಮಾನ್ಯ ಸಂಸದರಾದ ಬಿ ವೈ ರಾಘವೇಂದ್ರ ಅವರು ಹಾಗೂ ಶ್ರೀ ಮಾರುತಿ ಅಗ್ರಿ ಟೆಕ್ ಟ್ರಾಕ್ಟರ್ ಶೋರೂಮ್ ಮಾಲೀಕರಾದ ಶ್ರೀಯುತ ಗಣೇಶ್, ಶ್ರೀಯುತ ಬಾಬು, ಸೋಲಿಸ್ ಟ್ರ್ಯಾಕ್ಟರ್ ಕಂಪನಿಯ ಮುಖ್ಯ ಉದ್ಯೋಗಿಗಳು ಹಾಗೂ ಶಿವಮೊಗ್ಗ ಜಿಲ್ಲೆಯ ರೈತರ ಉಪಸ್ಥಿತರಿದ್ದರು.