City Rounds News

Kannada News Website

ಶಿವಮೊಗ್ಗ ಪತ್ರಿಕಾ ಭವನಕ್ಕೆ ಕೂಡಲೇ ಆಡಳಿತಾಧಿಕಾರಿ ಯನ್ನು ನೇಮಿಸುವಂತೇ (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ) ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಯವರಿಗೆ ಮನವಿ…!

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ . ಎಂ

 

ಶಿವಮೊಗ್ಗ: ಶಿವಮೊಗ್ಗ ಪತ್ರಿಕಾ ಭವನ ಕಟ್ಟಡದ ನಿರ್ಮಾಣಕ್ಕೆ ಸರ್ಕಾರದ ಅನುದಾನ ಮತ್ತು ವಿವಿದ ಸರ್ಕಾರದ ಇಲಾಖೆಗಳು ಹಾಗೂ ಸಂಸದರು, ಶಾಸಕರ ಅನುದಾನದಿಂದ ಕೋಟಿ ಗಟ್ಟಲೇ ಹಣ ಖರ್ಚು ಮಾಡಿ ಶಿವಮೊಗ್ಗ ದಲ್ಲಿನ ಪತ್ರಕರ್ತರಿ ಗೋಸ್ಕರ ನಿರ್ಮಾಣವಾದ ಶಿವಮೊಗ್ಗ ದಲ್ಲಿನ ಪತ್ರಿಕಾ ಭವನ ಇದೀಗ ಶಿವಮೊಗ್ಗ ಪ್ರೆಸ್ ಟ್ರಸ್ಟ್ ನ ಅಧ್ಯಕ್ಷರ ಖಾಸಾಗಿ ಸ್ವಂತ ಆಸ್ತಿಯಾಗಿದೆ

ಪತ್ರಿಕಾ ಭವನದ ನಿರ್ವಹಣೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಗೆ ಕೆಲವು ಒಪ್ಪಂದವನ್ನು ಮಾಡಿಕೊಂಡು ನಿರ್ವಹಣೆಗೆ ಬಿಟ್ಟು ಕೊಡಲಾಗಿತ್ತು.ಆದರೇ ಇದೀಗ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಗಳು ಪ್ರತಿಯೊಂದು ಪ್ರೆಸ್ ಮೀಟ್ ಮಾಡುವ ಆಯೋಜಕರಿಂದ ರೂ.2 ಸಾವಿರ ವಸೂಲಿ ಮಾಡಲಾಗುತ್ತಿದೆ ಅದೇ ರೀತಿ ಪ್ರೆಸ್ ನೋಟ್ ಪಡೆಯುವಾಗ ರೂ.150 ವಸೂಲಿ ಮಾಡಲಾಗುತ್ತಿದೆ. ಈ ಹಣದ ಲೆಕ್ಕಾಚಾರವನ್ನು ಇದುವರೆಗೆ ಜಿಲ್ಲಾಡಳಿತಕ್ಕಾಗಲೀ ಪತ್ರಕರ್ತರಿಗೆ ಆಗಲೀ ತೋರಿಸಿಲ್ಲ… ಪತ್ರಿಕಾಗೋಷ್ಠಿಯಿಂದ ತಿಂಗಳಿಗೆ ಸುಮಾರು 50 ಸಾವಿರ ರೂ ಹೆಚ್ಚು ಹಣ ಸಂಗ್ರಹವಾಗುತ್ತದೆ. ಅದರ ಜೊತೆಯಲ್ಲಿ ಇತರೇ ಕಾರ್ಯಕ್ರಮ ಗಳಿಗೆ ಸಾವಿರಾರು ರೂ ಹಣ ಪಡೆಯಲಾಗುತ್ತಿದೆ. ಪತ್ರಿಕಾಗೋಷ್ಠಿಯಲ್ಲಿ ವರ್ಷಾವಾರು ಇದುವರೆಗೂ ಸಂಗ್ರಹಿಸಿದ ಲಕ್ಷ ಲಕ್ಷ ಹಣ ಒಟ್ಟಾರೆ ಪತ್ರಿಕಾಭವನ ದಿಂದ ಸಂಗ್ರಹ ಆಗುವ ಹಣದ ಲೆಕ್ಕಾಚಾರ ಏನು? ಎಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ. ಸರ್ಕಾರದ ಅನುದಾನದಿಂದ ನಿರ್ಮಾಣ ವಾದ ಪತ್ರಿಕಾಭವನ ಪ್ರೆಸ್ ಟ್ರಸ್ಟ್ ನ ಸ್ವತ್ತು ಆಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಮನವಿಯಲ್ಲಿ ತಿಳಿಸಿದರು.

ಹಾಗೂ ಜಿಲ್ಲಾಧಿಕಾರಿಗಳು ನಮ್ಮ ಮನವಿಯನ್ನು ಪುರಸ್ಕರಿಸಿ ಪತ್ರಿಕಾ ಭವನವನ್ನು ಕೂಡಲೇ ತಮ್ಮ ವಶಕ್ಕೆ ಪಡೆದು ಅಲ್ಲಿಗೆ ಆಡಳಿತಾಧಿಕಾರಿ ಯನ್ನು ನೇಮಿಸಬೇಕು. ಮತ್ತು ಪತ್ರಿಕಾಭವನ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಸೂಲಿ ಮಾಡುವ ಹಣ ಮತ್ತು ಇತರೇ ಕಾರ್ಯಕ್ರಮದ ಬಗ್ಗೆ ವಸೂಲಿಯಾಗುವ ಹಣಕಾಸಿನ ಮಾಹಿತಿಯನ್ನು ಪಡೆದು ಆ ಹಣವನ್ನು ಜಿಲ್ಲಾಧಿಕಾರಿ ಗಳು ಪ್ರೆಸ್ ಟ್ರಸ್ಟ್ ಅಧ್ಯಕ್ಷರಿಂದ ವಸೂಲಿ ಮಾಡಬೇಕು ಹಾಗೂ ಜಿಲ್ಲಾಢಳಿತಕ್ಕೆ ಅಥವಾ ಸರ್ಕಾರದ ಖಜಾನೆಗೆ ಪತ್ರಿಕಾಭವನ ದಿಂದ ಸಂಗ್ರಹವಾದ ಹಣವನ್ನು ಕೂಡಲೇ ಕಟ್ಟುವಂತೆ ಆದೇಶ ಮಾಡಬೇಕು. ಮೇಲ್ಕಂಡ ಎಲ್ಲಾ ದೂರಿನ ಬಗ್ಗೆ ಕೂಡಲೇ ವಿಚಾರಣೆ ತನಿಖೆ ಮಾಡಿ ಸೂಕ್ತವಾದ ಕ್ತಮ ಕೈಗೊಳ್ಳಬೇಕು ಎಂಬುದು ಸಮಾನ ಮನಸ್ಕ ಪತ್ರಕರ್ತರ (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ) ಸಂಘಟನೆಯ ಸದಸ್ಯರ ಒತ್ತಾಸೆಯಾಗಿದೆ.ಕೂಡಲೇ ಪತ್ರಿಕಾಭವನ ವನ್ನು ತಮ್ಮ ಸುಪರ್ದಿಗೆ ಪಡೆಯಬೇಕಾಗಿ ಈ ಬಗ್ಗೆ ಸೂಕ್ತವಾದ ತನಿಖೆ ವಿಚಾರಣೆ ನಡೆಸಿ ಜಿಲ್ಲಾಧಿಕಾರಿ ಗಳು ಸೂಕ್ತವಾದ ಕ್ತಮ ಕೈಗೋಳ್ಳುವಂತೇ ಮನವಿ ಮಾಡಿದರು.

 

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸಂಬಂಧಿಸಿದ ಪತ್ರಿಕಾ ಭವನದ ದೂರಿನ ಬಗ್ಗೆ ಜಿಲ್ಲಾಧಿಕಾರಿ ಗಳು ಸೂಕ್ತವಾದ ಕ್ರಮ ಕೈಗೊಳ್ಳದಿದ್ದಲ್ಲಿ (ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ) ಸಂಘಟನೆಯಿಂದ ಶಿವಮೊಗ್ಗ ಘಟಕದ ಎಲ್ಲಾ ಪತ್ರಕರ್ತರು ಸದಸ್ಯರು ಸೇರಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಗೆ ಬೀಗ ಹಾಕಿ ಅದರ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂಬುದನ್ನು ಸಹ ಮನವಿಯಲ್ಲಿ ಸಲ್ಲಿಸಲಾಯಿತು ಎಂದು ತಿಳಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ KWJV (ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ), (ಜಿಲ್ಲಾದ್ಯಕ್ಷರು, ಉಪಾಧ್ಯಕ್ಷ ರಾದ ಚಿತ್ರಪ್ಪ ಯರಬಾಳ,) (ಕಾರ್ಯದರ್ಶಿ ಆರ್.ವಿ.ಕೃಷ್ಣ, ) (ಸಹಕಾರ್ಯದರ್ಶಿ ಶಿವರಾಜ್ ಬಿ.ಸಿ.,) (ಸಂಘಟನಾ ಕಾರ್ಯದರ್ಶಿ ಅಣ್ಣಪ್ಪ.ಎಂ,) ನಿರ್ದೆಶಕರಾದ (ಹೆಚ್.ಎಸ್.ವಿಷ್ಣುಪ್ರಸಾದ್, ) (ಗಿರೀಶ್ ಬಿ.ಸಿ,) (ಭರದ್ವಾಜ್ ಯು.ಎಸ್), (ಷಡಾಕ್ಷರಪ್ಪ ಜಿ.ಆರ್,) (ಬಸವರಾಜ್), (ಬಾಲಕೃಷ್ಣ ನಾಯಕ್), (ಮಂಜಪ್ಪ,) (ರವಿ), (ಮನೋಜ್ ಕಮಾರ್ ) ಹಾಗೂ ಮುಂತಾದವರು ಹಾಜರಿದ್ದರು.