City Rounds News

Kannada News Website

ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪ್ರಭು ಅಲಿಯಾಸ್ ಪ್ರಭಾಕರ್ ನಿಂದ ಪೌರಕಾರ್ಮಿಕನಿಗೆ ಮಾನಸಿಕ ಹಿಂಸೆ : ಮಹಾನಗರ ಪಾಲಿಕೆ ನೌಕರರಿಂದ ಪ್ರತಿಭಟನೆ..!

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ.ಎಂ

 

ಶಿವಮೊಗ್ಗ: ಮಹಾನಗರ ಪಾಲಿಕೆ ಪೌರ ಕಾರ್ಮಿಕರಾದ ಮೂರ್ತಿ ಎಂಬುವವರು ದಿನಾಂಕ 02.01.2025 ರಂದು ಮೊಬೈಲ್ ಮೂಲಕ ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿಡಿಯೋ ಒಂದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದರು ಶಿವಮೊಗ್ಗ ಮಹಾನಗರ ಪಾಲಿಕೆ 10ನೇ ವಾರ್ಡಿನ ಮಾಜಿ ಕಾರ್ಪೊರೇಟರ್ ಪ್ರಭು ಎಂಬುವರು ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದು ಆದ್ದರಿಂದ ಮನನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋ ಒಂದನ್ನು ಸ್ನೇಹಿತರ ಹಾಗೂ ಸಂಬಂಧಪಟ್ಟವರಿಗೆ ಕಳಿಸಿದ್ದರು. ತದಾದ ನಂತರ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರು ಹಾಗೂ ಸಹಕಾರ್ಮಿಕರು ಮೂರ್ತಿಯನ್ನು ಹುಡುಕಲು ಪ್ರಯತ್ನಿಸಿದ್ದರು ಆದರೆ ಮೂರ್ತಿಯವರು ಮೊಬೈಲ್ ಸ್ವಿಚ್ ಆಫ್ ಅಂಡ್ ಆನ್ ಮಾಡುತ್ತಿದ್ದ ಕಾರಣ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ದೊರಕದೆ ಕೆಲಕಾಲ ಕುಟುಂಬದವರು ಹಾಗೂ ಸಹ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದರು. ಅನಂತರ ಮೂರ್ತಿಯವರೇ ಶಿವಮೊಗ್ಗ ಸರಕಾರಿ ಆಸ್ಪತ್ರೆಗೆ ದಾಖಲಾಗಿದ ನಂತರ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದಾಗ ನನ್ನ ಮಕ್ಕಳು ನೆನಪಾಯಿತು ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳದೆ ವಾಪಸ್ಸು ಬಂದು ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿಸಿದರು.

ಆತ್ಮಹತ್ಯೆ ಯತ್ನಕ್ಕೆ ಮುಖ್ಯ ಕಾರಣವಾದ ವಿಚಾರವೇನು..?

ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಭು ಅಲಿಯಾಸ್ ಪ್ರಭಾಕರ್ ರವರು ಪ್ರತಿ ದಿನ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ನನ್ನ ಕೆಲಸವನ್ನು ಮಾಡಲು ನನಗೆ ಬಿಡುತ್ತಿಲ್ಲ ಪ್ರತಿದಿನ ಬೆಳಗ್ಗೆ ನನ್ನ ಮೊಬೈಲ್ ನಿಂದ ಮೊದಲನೇ ಕರೆ ಇವರಿಗೆ ಮಾಡಬೇಕೆಂದು ಮತ್ತು ಅವರು ಹೇಳಿದ ಕೆಲಸವನ್ನು ಮಾತ್ರ ಮಾಡಬೇಕೆಂದು ಕಟ್ಟಪ್ಪನೆಗಳನ್ನು ಮಾಡುತ್ತಿದ್ದು ಇದರಿಂದ ಮನನೊಂದು ಏನು ಮಾಡಬೇಕೆಂದು ತೋಚದೇ ಆತ್ಮಹತ್ಯೆಗೆ ಪ್ರಯತ್ನಿಸಿದೆ ಎಂದು ತಿಳಿಸಿದ್ದಾರೆ.

ಈ ವಿಚಾರವಾಗಿ ಇಂದು ದಿನಾಂಕ 0 3 -01 -2025 ರಂದು ಮಹಾನಗರ ಪಾಲಿಕೆಯ ನೌಕರರಿಂದ ಪಾಲಿಕೆಯ ಮುಂಬಾಗದ ಗೇಟ್ ಬೀಗ ಹಾಕುವುದರ ಮೂಲಕ ತಮ್ಮ ಕರ್ತವ್ಯವನ್ನು ನಿಲ್ಲಿಸಿ ಪತಿಭಟನೆಯನ್ನು ಮಾಡಲಾಯಿತು.