ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ಭದ್ರಾವತಿ: ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಆಚರಿಸಲಾಗುತ್ತಿರುವ ಅಪರಾಧ ತಡೆ ಮಾಸಾಚರಣೆ–2024 ರ ಅಂಗವಾಗಿ, ಈ ದಿನ ದಿನಾಂಕಃ 20-12-2024 ರಂದು ಭದ್ರಾವತಿ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಶಾಂತಲಾ, ಪಿಎಸ್ಐ ರವರು ಭದ್ರಾವತಿ ನ್ಯೂಟೌನ್ ನ JTS ಪ್ರೌಢಶಾಲೆಯಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು, ವಿಧ್ಯಾರ್ಥಿಗಳ ಕುರಿತು ಮಾತನಾಡಿ ಈ ಕೆಳಕಂಡ ಮಾಹಿತಿ ನೀಡಿದರು.
ನಿಮ್ಮ ಸುರಕ್ಷತೆಯ ಮತ್ತು ಅಪಘಾತ ಮುಕ್ತ ಸಮಾಜದ ನಿರ್ಮಾಣದ* ದೃಷ್ಠಿಯಿಂದ ಸಂಚಾರ ನಿಯಮಗಳನ್ನು ಪಾಲನೆ ಮಾಡಿ. ರಸ್ತೆಯಲ್ಲಿ ನಡೆದು ಹೋಗುವಾಗ, ರಸ್ತೆಯ ಎಡಭಾಗದ ಪಾದಚಾರಿ ಮಾರ್ಗದಲ್ಲೇ ನಡೆದು ಹೋಗಿ.

ತಲೆಗೆ ಸಂಪೂರ್ಣ ರಕ್ಷಣೆ ನೀಡುವ ಶಿರಸ್ತ್ರಾಣ ಧರಿಸದೇ ಇದ್ದಲ್ಲಿ, ಅಪಘಾತದ ಸಂದರ್ಭದಲ್ಲಿ ತಲೆಗೆ ಪೆಟ್ಟಾಗಿ ಪ್ರಾಣಾಪಾಯವಾಗುವ* ಸಂಧವವಿರುತ್ತದೆ. ಆದ್ದರಿಂದ ದ್ವಿ ಚಕ್ರ ವಾಹನದ ಚಾಲಕ ಮತ್ತು ಹಿಂಬದಿ ಸವಾರ ಇಬ್ಬರೂ ಶಿರಸ್ತ್ರಾಣ ಧರಿಸಬೇಕು. ನೀವು ರಸ್ತೆಯಲ್ಲಿ ಹೋಗುವಾಗ ನಿಮ್ಮ ಎದುರಿಗೆ ಯಾವುದುದಾದರೂ ಅಪಘಾತಗಳು ಘಟಿಸಿದರೆ, ಗಾಯಾಳುಗಳಿಗೆ ಸಹಾಯ ಮಾಡಿ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರತರೆ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗುತ್ತಾರೆ.
18 ವರ್ಷ ತುಂಬುವುದಕ್ಕಿಂತ ಮುನ್ನ ಯಾವುದೇ ಕಾರಣಕ್ಕೂ ವಾಹನ ಚಾಲನೆ ಮಾಡಬೇಡಿ. ಇದು ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧ ಹಾಗೂ ವಾಹನದ ಮಾಲೀಕರಿಗೆ ದಂಡ ಇಲ್ಲವೇ ಶಿಕ್ಷೆ ವಿಧಿಸಲಾಗುವುದು. ಆದ್ದರಿಂದ ಕುತೂಹಲಕ್ಕೂ ಕೂಡ ವಾಹನ ಚಾಲನೆ ಮಾಡಬೇಡಿ ಹಾಗೂ ಸುರಕ್ಷಿತವಾಗಿರಿ. ಅಪಘಾತವಾದಾಗ ಹಾಗೂ ಯಾವುದೇ ತುರ್ತು ಸಂದರ್ಭದಲ್ಲಿ, ಸಹಾಯ ಹಾಗೂ ರಕ್ಷಣೆಗಾಗಿ ERSS-112 ತುರ್ತು ಸಹಾಯವಾಣಿಗೆ ಕರೆ ಮಾಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು , ಶಿಕ್ಷಕರು ಮತ್ತು ವಿಧ್ಯಾರ್ಥಿಗಳು ಹಾಗೂ ಭದ್ರಾವತಿ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.

More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…