ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ಶಿವಮೊಗ್ಗ: ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಸಿ ಬ್ಲಾಕ್ ನಲ್ಲಿ ಮಹಿಳೆಯ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ 20 × 30 ಸುತ್ತಳತೆಯ ನಿವೇಶನವನ್ನು ನೋಂದಣಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಈಶ್ವರ್ ಮತ್ತು ಅವರ ಪತ್ನಿ ಸುಧಾರಾಣಿ ಎಂಬುವರ ಹೆಸರಿನಲ್ಲಿ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಸಿ ಬ್ಲಾಕ್ ಅಲ್ಲಿ ನಿವೇಶನ ಸಂಖ್ಯೆ 579ರಲ್ಲಿ 20 ಎಂಟು 30 ಅಡಿ ಅಳತೆಯ ನಿವೇಶನ ಮಂಜೂರಾಗಿತ್ತು. ಬೇರೊಬ್ಬ ನಕಲಿ ಈಶ್ವರ್ ಎಂಬಾತ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಶಾಮಿಲ್ ಆಗಿ ಸುಧಾರಾಣಿ ಅವರ ನಕಲಿ ಮರಣ ಪತ್ರ ಸೃಷ್ಟಿಸಿದಲ್ಲದೆ ಈಶ್ವರ್ ಅವರ ಹೆಸರಿಗೆ ಸಿಂಗಲ್ ಖಾತೆ ಮಾಡಿಸಿಕೊಂಡು ಬಳಿಕ ನಿವೇಶವನ್ನು ಬೆಳ್ಳಿಯಮ್ಮ ಕೋಂ ಶರವಣ ಎಂಬುವರಿಗೆ ನಿವೇಶನವನ್ನು ಮಾರಾಟ ಮಾಡಲಾಗಿದೆ.

ಈ ನಿವೇಶನವನ್ನು ಶಿವಮೊಗ್ಗ ಸಬ್ ರಿಜಿಸ್ಟರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸಿ ಬೆಳ್ಳಿಯಮ್ಮ ಅವರ ಹೆಸರಿಗೆ ಕ್ರಯ ಪತ್ರ ಮಾಡಲಾಗಿದೆ. ಸುಧಾರಾಣಿ ಅವರ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಪಾಲಿಕೆಯಲ್ಲಿ ಖಾತೆ ಮಾಡಿಸಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕ್ರಯಪತ್ರ ಮಾಡಿಸಿದ ಈಶ್ವರ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
(ಜಾಹೀರಾತು)


More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ಅಪೌಷ್ಟಿಕತೆ ಮುಕ್ತಗೊಳಿಸಿ-ಅಂಗನವಾಡಿ ಕಟ್ಟಡಗಳ ಕಾಮಗಾರಿ ಪೂರ್ಣಗೊಳಿಸಿ-ಡಿಸಿ ಸೂಚನೆ..
ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಕಾರ್ಯಕ್ರಮಗಳು…