ಅಧಿಕ ಆಸ್ತಿಗಳಿಕೆ ಆರೋಪದ ಹಿನ್ನೆಲೆ ಆರ್. ಪಿ .ಜಾದವ್ ಕಲಬುರಗಿ ಪಾಲಿಕೆಯ ಭ್ರಷ್ಟಾಧಿಕಾರಿ ಉಪ ಆಯುಕ್ತ ಮನೆ ಮೇಲೆ ಲೋಕಾಯುಕ್ತ ದಾಳಿ…!

ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

 

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತ ಆರ್.ಪಿ .ಜಾಧವ್ ಅವರ ಮನೆ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ದಾಳಿ ಮಾಡಿದ್ದಾರೆ ಕಳೆದ ಕೆಲವು ವರ್ಷಗಳಿಂದ ಜಾದವ್ ಅವರು ಪಾಲಿಕೆಯಲ್ಲಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಆದಾಯಕ್ಕಿಂತ ಹೆಚ್ಚಿನ ಆಸ್ತಿಗಳಿಕೆ ಆರೋಪದ ಮೇಲೆ ಆರ್. ಪಿ. ಜಾದವ್ ರವರಿಗೆ ಸಂಬಂಧಿಸಿದ ಆಸ್ತಿಗಳ  ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಬಿಕೆ ಉಮೇಶ್ ನೇತೃತ್ವದ ಮೂರು ತಂಡಗಳಲ್ಲಿ ದಾಳಿ ನಡೆಸಲಾಗಿದೆ.

 

ಜಾಧವ್ ರವರಿಗೆ ಸಂಬಂಧಪಟ್ಟಂತೆ ಎನ್‌ಜಿಓ ಕಲೋನಿಯ , ಫರಹತಾ ಬಾದ್ ಸಮೀಪದ ಫಾರ್ಮ್ ಹೌಸ್ ಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಪಾಲಿಕೆಯ ಅವರ ಕಚೇರಿಯಲ್ಲಿ ಶೋಧ ಕಾರ್ಯ ಮಾಡಲಾಗಿದೆ. ಲೋಕಾಯುಕ್ತ ದಾಳಿ ವೇಳೆ ಉಪ ಆಯುಕ್ತ ಜಾದವ್ ಅವರ ಬಳಿ ನಾಲ್ಕು ನಿವೇಶನ, ಎರಡು ಮನೆ, ಏಳು ಎಕ್ಕರೆ ಕೃಷಿ ಜಮೀನು ಸೇರಿ ₹2.37 ಕೋಟಿ ಮೌಲ್ಯದ ಸ್ಥಿರ ಆಸ್ತಿ ಹಾಗೂ ₹1.50 ಲಕ್ಷ ನಗದು, ₹18 ಲಕ್ಷ ಮೌಲ್ಯದ ಚಿನ್ನಾಭರಣ, ₹15.50 ಲಕ್ಷ ಮೌಲ್ಯದ ವಾಹನಗಳು,₹ 50 ಲಕ್ಷ ಪುತ್ರನ ವೈದ್ಯಕೀಯ ವಿದ್ಯಾಭ್ಯಾಸದ ದಾಖಲಾತಿ ಶುಲ್ಕ₹36.46 ಲಕ್ಷ್ಯ ಮೌಲ್ಯದ ಷೇರು ಮತ್ತು ಬಾಂಡ್ ಸೇರಿ₹1.21 ಕೋಟಿ ಮೌಲ್ಯದ ಚರ ಆಸ್ತಿ ಒಳಗೊಂಡು ಒಟ್ಟು₹3.58 ಕೋಟಿ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

 

                 ( ಜಾಹೀರಾತು )