ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ  ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ..!

 

ಶಿವಮೊಗ್ಗ  :ಸಿಟಿ ರೌಂಡ್ಸ್ ನ್ಯೂಸ್ 
ಅಣ್ಣಪ್ಪ ಎಂ

ಶಿವಮೊಗ್ಗ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ ಸಮಿತಿಗೆ ಅಧಿಕಾರತೇರ ಸದಸ್ಯರನ್ನು ನೇಮಕ ಮಾಡಿದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿ ಸಾಲಿನಂತೆ ಪ್ರಸಕ್ತ ವರ್ಷವೂ ಕೂಡ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ವರ್ಗದ ಜನರ ಮೇಲೆ ನಡೆಯುವ ದೌರ್ಜನ್ಯ ಮತ್ತು ದಬ್ಬಾಳಿಕೆಯನ್ನು ತಡೆಯುವ ನಿಟ್ಟಿನಲ್ಲಿ ದೌರ್ಜನ್ಯ ಪ್ರತಿಬಂಧ ಸಮಿತಿಗೆ ಅಧಿಕಾರತೇರ ಸದ್ಯಸರನ್ನು ಆಯ್ಕೆ ಮಾಡುವ ಸಲುವಾಗಿ ಮಾನ್ಯ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಇವರು ಅರ್ಜಿಯನ್ನು ಕರೆದಿದ್ದು ಅರ್ಜಿಯಲ್ಲಿ ಅರ್ಜಿದಾರರು ಎಷ್ಟು ವರ್ಷಗಳಿಂದ ಸಮಾಜಸೇವೆ ಮಾಡಿದ್ದೀರಿ ಹಾಗೂ ತಮ್ಮ ಅನುಭವದ ವಿಚಾರವನ್ನು ಮಂಡಿಸುವುದರ ಜೊತೆಗೆ ಸೂಕ್ತ ದಾಖಲಾತಿಗಳನ್ನು ಸಲ್ಲಿಸುವಂತೆ ತಿಳಿಸಿದ್ದು ಅಲ್ಲದೆ ತಾವುಗಳು ಯಾವ ಸಂಘಟನೆಯಲ್ಲಿ ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತೀರಾ ಎಂಬ ವಿಚಾರವನ್ನು ಹಾಗೂ ಪರಿಶಿಷ್ಟ ಜಾತಿ ವರ್ಗದ ಜನಾಂಗದ ಶ್ರೇಯಿಸಿಗಾಗಿ ತಾವುಗಳು ಪ್ರೋತ್ಸಾಹಿಸಿ ಶ್ರಮಿಸಿರುವ ಬಗ್ಗೆ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಸ್ಪಷ್ಟವಾಗಿ ತಿಳಿಸಿದ್ದು ಅದರಂತೆ ಸುಮಾರು 55 ರಿಂದ 60 ಜನ ಅರ್ಜಿದಾರರು ಮೇಲ್ಕಂಡ ಸಮಿತಿಯ ನಾಮ ನಿರ್ದೇಶನ ಸಮಿತಿಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಅರ್ಜಿದಾರರ ಅರ್ಜಿಯ ವಿಚಾರವಾಗಿ ಪೋಲಿಸ್ ಇಲಾಖೆಗೆ ಪತ್ರವಂದನ್ನು ಬರೆದು. ಈ ಅರ್ಜಿದಾರರ ಬಗ್ಗೆ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದಲ್ಲಿ ವರದಿ ನೀಡುವಂತೆ ಕೋರಿರುವುದು ಸ್ಪಷ್ಟವಾಗಿ ಇದ್ದರೂ ಸಹ ಪೂರ್ಣ ಪ್ರಮಾಣದಲ್ಲಿ ಅರ್ಜಿದಾರರ ಅರ್ಜಿಯ ವಿಚಾರವಾಗಿ ಪೋಲಿಸ್ ತನಿಖಾ ವರದಿ ಬಂದಿಲ್ಲದೇ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ತರಾತುರಿಯಲ್ಲಿ ಸಮಿತಿಯನ್ನು ರಚಿಸಿ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಕರ್ತವ್ಯ ಲೋಪ ಎಸಿಗಿರುತ್ತಾರೆ . ಅಲ್ಲದೇ ಪರಿಶಿಷ್ಟ ಜಾತಿಯ ಮಾದಿಗ, ಚೆಲುವಾದಿ, ಹಾಗೂ ಬಂಜಾರ, ಸಮುದಾಯಕ್ಕೆ ಮೇಲ್ಕಂಡ ಸಮಿತಿಯಲ್ಲಿ ಪ್ರಾತಿನಿತ್ಯ ನೀಡದೆ ಪರಿಶಿಷ್ಟರಿಗೆ ಅನ್ಯಾಯ ಮಾಡಿರುವ ಮೇಲ್ಕಂಡ ಅಧಿಕಾರಿ ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿ. ದೌರ್ಜನ್ಯ ಸಮಿತಿಗೆ ಆಯ್ಕೆ ಮಾಡಿರುವುದು ಕಾನೂನುಬಾಹಿರವಾಗಿದ್ದು, ಕರ್ತವ್ಯ ಲೋಪ ಎಸೆಗಿರುವ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಒಂದು ವೇಳೆ ತಾವುಗಳು ಸದರಿ ವಿಚಾರವನ್ನು ಶೀಘ್ರವಾಗಿ ಕ್ರಮ ಕೈಗೊಳ್ಳದೆ ಇದ್ದಲ್ಲಿ ಸಮಿತಿ ಹಾಗೂ ಹಲವಾರು ಸಂಘಟನೆಗಳ ಒಕ್ಕೂಟದೊಂದಿಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಸಂಚಾಲಕರಾದ ಹರಮಘಟ್ಟ ರಂಗಪ್ಪ ಗುಡುಗಿದರು. ಈ ಪ್ರತಿಭಟನೆಯಲ್ಲಿ ಅರುಣ್ ಕುಮಾರ್ ಪಿ. ಜಿಲ್ಲಾ ಸಂಘಟನಾ ಸಂಚಾಲಕರು ಜೈ ಭೀಮ್ ಕನ್ನಡ ಜಾಗೃತಿ ವೇದಿಕೆ, ಎಚ್ಎನ್ ಪ್ರಭು ಜಿಲ್ಲಾಧ್ಯಕ್ಷರು ದಲಿತ ವಿಮೋಚನಾ ಸೇನೆ, ತೇಜಸ್ ಆರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಮಾ.ಮಹಾಸಭಾ, ಶಿವಮೊಗ್ಗ, ಸುನಿತಾ ರಾಜ್ ರಾಜ್ಯ ಸಂಘಟನಾ ಸಂಚಾಲಕರು ಕ.ದ.ಸಂ.ಸ. ಶಿಮೊಗ್ಗ, ಸಿ ಮೂರ್ತಿ ಜಿಲ್ಲಾಧ್ಯಕ್ಷರು ಮಾದಿಗ ದಂಡೋರ, ಶಿವಮೊಗ್ಗ, ಎಂ ಮಂಜುನಾಥ್ ತಾಲೂಕು ಸಂಚಾಲಕರು ಕ .ದ. ಸಂ. ಸ . ಶಿವಮೊಗ್ಗ, ಜಿ ಎಸ್ ತಿಪ್ಪೇಸ್ವಾಮಿ ರಾಜ್ಯಾಧ್ಯಕ್ಷರು, ಡಾಕ್ಟರ್||. ಬಿ ಆರ್. ಅಂಬೇಡ್ಕರ್ ಸಮುದಾಯ ಸಮಿತಿ, ಮಂಜುನಾಥ್ ಜಿಲ್ಲಾ ಉಪಾಧ್ಯಕ್ಷರು ಮಾ. ಮಹಾಸಭಾ, ಶಿವಮೊಗ್ಗ , ನಾಗರಾಜ್ ನಗರಾಧ್ಯಕ್ಷರು ಮಾ.ಮಹಾಸಭಾ, ಶಿವಮೊಗ್ಗ , ಎಸ್ ಕುಮಾರ್ ಜಿಲ್ಲಾ ಉಪಾಧ್ಯಕ್ಷರು ಜೈ ಭೀಮ್ ಕನ್ನಡ ಜಾಗೃತಿ ವೇದಿಕೆ, ಎಂ ಆರ್. ಶಿವಕುಮಾರ್ (ಆಸ್ತಿ) ಜಿಲ್ಲಾ ಸಂಘಟನಾ ಸಂಚಾಲಕರು ಕ.ದ. ಸಂ.ಸ. ಶಿವಮೊಗ್ಗ ರವರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

        ( ಜಾಹೀರಾತು)