ಶಿವಮೊಗ್ಗ : ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ಬೀದರ್ : ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಭ್ರಷ್ಟಾಧಿಕಾರಿಗಳ ಹಾವಳಿ, ಅಧಿಕಾರಿಗಳ ಹಣದಾಸೆಗೆ ಸಾರ್ವಜನಿಕರ ತೆರಿಗೆಯನ್ನು ಲೂಟಿ ಹೊಡೆಯುತ್ತಿರುವ ಅಧಿಕಾರಿಗಳನ್ನು ಸಾರ್ವಜನಿಕರ ದೂರಿನ ಮೇರೆಗೆ ಲೋಕಾಯುಕ್ತರ ದಾಳಿ. ಸದ್ಯ ರಾಜ್ಯದಲ್ಲಿ ಮುಡಾ ಹಗರಣ ಭಾರಿ ಸಂಚಲನ ಸೃಷ್ಟಿಸಿತ್ತು ಇದರ ಬೆನ್ನಲ್ಲೆ ಇದೀಗ ಬೀದರ್ ನಲ್ಲಿ ಬುಡಾದ ಕಮಿಷನರ್ ಶ್ರೀಕಾಂತ್ ಚಿಮಕೋಡೆ ಭ್ರಷ್ಟಾಧಿಕಾರಿ 10 ಲಕ್ಷ ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಬಲೆಗೆ ಬಿದ್ದಿರುವ ಮೂರು ಮಿಕಗಳು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಭ್ರಷ್ಟ ಅಧಿಕಾರಿ ಶ್ರೀಕಾಂತ್ ಚಿಮಾಕೋಡೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೇಔಟ್ ನಿರ್ಮಾಣಕ್ಕೆ ಅನುಮತಿ ನೀಡಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ವೇಳೆ 40 ಲಕ್ಷ ಲಂಚ ನೀಡುವಂತೆ ಬುಡಾ ಆಯುಕ್ತ ಶ್ರೀಕಾಂತ್ ಚಿಮಕೋಡೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಸಿದ್ದು ಹೂಗಾರ್ ಎನ್ನುವ ವ್ಯಕ್ತಿಯ ಬಳಿ 50 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದ ಬುಡಾ ಆಯುಕ್ತ ಭ್ರಷ್ಟಾಧಿಕಾರಿ ಶ್ರೀಕಾಂತ್ ಚಿಮಕೋಡೆ 10 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಶ್ರೀಕಾಂತ್ ಚಿಮಕೋಡೆ ಮತ್ತು ಈ ವಿಚಾರದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಸದಸ್ಯರು

ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ. ಸದ್ಯ ಈ ಮೂರು ಭ್ರಷ್ಟಮಿಕಗಳನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

More Stories
ದೀಪಾವಳಿ ಹಬ್ಬದ ಪ್ರಯುಕ್ತ ಕಾಂಗ್ರೆಸ್ ಸರ್ಕಾರದಿಂದ ಸಾರ್ವಜನಿಕರಿಗೆ ಗಿಫ್ಟ್..?
ನಕಲಿ ಔಷಧ ಅಡ್ಡೆಗಳ ಮೇಲೆ ಇ ಡಿ ದಾಳಿ!!
ಟ್ರಾಫಿಕ್ ಚಲನ್ಗಳಿಗೆ ಶೇ. 50 ರಿಯಾಯಿತಿ: ದಂಡ ಪಾವತಿಗೆ ಅವಕಾಶ!