City Rounds News

Kannada News Website

ಸಿಟಿ ರೌಂಡ್ಸ್ ಪತ್ರಿಕೆಯ ಹೋರಾಟಕ್ಕೆ ಸಂದ ಜಯ

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ

ಶಿವಮೊಗ್ಗ ಮಹಾನಗರ ಪಾಲಿಕೆಯ ಜನನ ಮತ್ತು ಮರಣ ನೊಂದಣಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅನೇಕ ಬಾರಿ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದರು ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಆಯುಕ್ತರಾಗಲಿ ಸಂಬಂಧಪಟ್ಟಂತಹ ಅಧಿಕಾರಿಗಳಲಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಭ್ರಷ್ಟರು ನೀಡಿದಂತಹ ಎಂಜಲು ಕಾಸಿಗೆ ಆಸೆಪಟ್ಟು ಕಂಡರೂ ಕಾಣದಂತೆ ಸಾರ್ವಜನಿಕರಿಗೆ ಆಗುತ್ತಿದ್ದಂತಹ ಸಮಸ್ಯೆಗಳಿಗೆ ಉಡಾಫೆ ಉತ್ತರಗಳನ್ನು ನೀಡುತ್ತಾ ಸಾರ್ವಜನಿಕರನ್ನು ಅಲೆದಾಡಿಸುತ್ತಿದ್ದರು. ಈ ವಿಚಾರವಾಗಿ ಕೆಲ ಸಾರ್ವಜನಿಕರು ಸಿಟಿ ರೌಂಡ್ಸ್ ಪತ್ರಿಕೆಯ ಸಂಪಾದಕರನ್ನ ಸಂಪರ್ಕಿಸಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಜನನ ಮತ್ತು ಮರಣ ವಿಭಾಗದಲ್ಲಿ ಸರ್ಕಾರದ ಆದೇಶದಂತೆ ಜನನ ಮತ್ತು ಮರಣ ಪತ್ರ ನೀಡಲು 5 ರೂಪಾಯಿಗಳ ಬೆಲೆ ಇದ್ದರೂ ಸಾರ್ವಜನಿಕರಿಂದ ಒಂದು ಪ್ರತಿಗೆ 20 ರೂಪಾಯಿಗಳಂತೆ ಪಡೆಯುತ್ತಿದ್ದಾರೆ ಈ ವಿಚಾರವಾಗಿ ನೀವು ಸಾರ್ವಜನಿಕರ ಪರವಾಗಿ ಭ್ರಷ್ಟರ ವಿರುದ್ಧ ಈ ವಿಚಾರವನ್ನು ಪ್ರಶ್ನಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಇಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ನ್ಯಾಯ ಕೊಡಿಸುವಂತೆ ಕೆಲ ಸಾರ್ವಜನಿಕರು ಪತ್ರಕರ್ತನಲ್ಲಿ ಸಹಾಯ ಕೋರಿದ್ದರು. ಸಿಟಿ ರೌಂಡ್ಸ್ ಪತ್ರಿಕೆ ಸಾರ್ವಜನಿಕರ ದೂರನ್ನು ಸ್ವೀಕರಿಸಿ ಶಿವಮೊಗ್ಗ ಮಹಾನಗರ ಪಾಲಿಕೆಯ ಜನನ ಮತ್ತು ಮರಣ ವಿಭಾಗದ ವಿಚಾರವಾಗಿ ನಡೆಯುತ್ತಿದ್ದಂತ ಭ್ರಷ್ಟಾಚಾರವನ್ನು ಪ್ರಶ್ನಿಸಿ ಕೇಳಲು ಮುಂದಾದಾಗ. ಭ್ರಷ್ಟರಿಂದ ಲಂಚ ಪಡೆಯುತ್ತಿದ್ದಂತಹ ಕೆಲ ರಾಜಕಾರಣಿಗಳು ಹಾಗೂ ಸಣ್ಣ ಪುಟ್ಟ ಪುಡಿ ರೌಡಿಗಳು, ಕೆಲ ಲಜ್ಜೆಗೆಟ್ಟಂತಹ  ಕೆಲ ಹಳೆಯ ಪತ್ರಕರ್ತರು, ಅವರು ನಮ್ಮ ಸಂಬಂಧಿಕರು, ಇವಳು ನನ್ನ ತಂಗಿ , ಅವರು ನನಗೆ ತುಂಬಾ ಬೇಕಾಗಿದ್ದಾರೆ, ಈ ರೀತಿಯಾಗಿ ಜನನ ಮತ್ತು ಮರಣ ವಿಭಾಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಪ್ರಶ್ನಿಸಬೇಡ,ಆ ವಿಚಾರವಾಗಿ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗ ಬೇಡ ಎಂದು ಪತ್ರಕರ್ತನನ್ನು ಎದುರಿಸಲು ಮುಂದಾಗಿ ಸುಳ್ಳು ಆರೋಪಗಳನ್ನು ಬರುವಂತೆ ಸೃಷ್ಟಿಸಿ. ಜನನ ಮತ್ತು ಮರಣ ವಿಭಾಗದ ಕೆಲ ಅಧಿಕಾರಿಗಳು ಸಿಬ್ಬಂದಿಗಳು ಜೊತೆಗೂಡಿ ಹಲವಾರು ರೀತಿಯಲ್ಲಿ ಪತ್ರಕರ್ತನನ್ನು ಅವನ ಧೈರ್ಯವನ್ನು ಮನಸ್ಸನ್ನು ಕುಗ್ಗಿಸುವಂತಹ ಕೆಲಸ ಕಾರ್ಯಗಳನ್ನು ಮಾಡಿದ್ದರು. ಆದರೆ ಇದ್ಯಾವುದಕ್ಕೂ ಜಗ್ಗದೆ ಕುಗ್ಗದೆ ನ್ಯಾಯ ನೀತಿಯಿಂದ, ಜನನ ಮತ್ತು ಮರಣ ವಿಭಾಗದಲ್ಲಿ ಭ್ರಷ್ಟಾಚಾರವನ್ನು ಬಯಲು ಎಳೆದು ಪತ್ರಿಕೆಯಲ್ಲಿ ಪ್ರಸಾರ ಮಾಡಿ ಮಹಾನಗರ ಪಾಲಿಕೆಯ ಜನನ ಮತ್ತು ಮರಣ ವಿಭಾಗದ ಕೆಲ ಭ್ರಷ್ಟಾಚಾರಿಗಳ ವಿರುದ್ಧ ಶಿವಮೊಗ್ಗ ಜಿಲ್ಲೆಯ ಮುಖ್ಯ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೂ ತಿಳಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿ ಮಾಡಲಾಯಿತು. ಕೆಲವು ದಿನಗಳ ಬಳಿಕ ಶಿವಮೊಗ್ಗ ಮಹಾನಗರ ಪಾಲಿಕೆಯ ಜನನ ಮತ್ತು ಮರಣ ವಿಭಾಗದಲ್ಲಿ ಸಾರ್ವಜನಿಕರಿಂದ ಹಣ ಪಡೆಯುತ್ತಿರುವಾಗ ಅಧಿಕಾರಿ ಹಾಗೂ ಕೆಲ ಸಿಬ್ಬಂದಿಯ ಮೇಲೆ ಸಾರ್ವಜನಿಕ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರದ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ಅದಾದ ನಂತರದಿಂದಲೂ ದಿನಾಂಕ 08.11.2024 ರವರೆಗೂ ಜನನ ಮತ್ತು ಮರಣ ವಿಭಾಗದಲ್ಲಿ ಸಾರ್ವಜನಿಕರಿಂದ ಸರ್ಕಾರದ ಸುತ್ತೋಲೆಯಂತೆ ಜನನ ಮತ್ತು ಮರಣ ಪತ್ರಕ್ಕೆ ಐದು ರೂಪಾಯಿಗಳನ್ನು ಸ್ವೀಕರಿಸುವಂತೆ ನಿಯಮಗಳಿದ್ದರೂ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ತಮ್ಮದೇ ಅಧಿಕಾರದ  ಜನನ ಮತ್ತು ಮರಣ ವಿಭಾಗದ ಅಧಿಕಾರಿ ಸಾರ್ವಜನಿಕರಿಂದ ಹೆಚ್ಚಿನ ಮೊತ್ತ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದ್ದರು, ಯಾವುದೇ ಕಂಡಿಕೆ ಅಥವಾ ದಾಖಲೆಗಳು ಇರುವುದಿಲ್ಲ. ಶಿವಮೊಗ್ಗ ಜಿಲ್ಲೆಯ ಕೆಲ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಕೆಲ ಸಿಬ್ಬಂದಿಗಳು  ಹಾಗೂ ಕೆಲ ಅಧಿಕಾರಿಗಳ ವಿರುದ್ಧ ಪ್ರಶ್ನೆ ಮಾಡಲು ಸಾರ್ವಜನಿಕರಾಗಲಿ ಅಥವಾ ಕೆಲ ಪತ್ರಕರ್ತರು ಮುಂದಾದಾಗ ಕೆಲ ಹಳೆಯ ಪತ್ರಕರ್ತರು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಪತ್ರಕರ್ತರ ಮೇಲೆ ಆರೋಪಿಸಿ ಕೆಲ ಪತ್ರಕರ್ತರು ಕೆಲ ಸರ್ಕಾರಿ ಕಚೇರಿಯ ಕೆಲ ಅಧಿಕಾರಿ ಹಾಗೂ ಸಿಬ್ಬಂದಿಗಳು ನೀಡುತ್ತಿರುವ ಎಂಜಲು ಕಾಸಿಗೆ ನಾಯಿಯಂತೆ ಅವರನ್ನು ಕಾಯುತ್ತಿದ್ದಾರೆ.

ದಿನಾಂಕ 07-11-2024 ರಂದು ಜನನ ಮತ್ತು ಮರಣ ವಿಭಾಗಕ್ಕೆ ಅಧಿಕಾರಿಯಾಗಿ ಸೇವೆಗೆ ಹಾಜರಾದಂತಹ ಮಹಿಳಾ ಅಧಿಕಾರಿ (ರಚನ ) ರವರು (ಜನನ ಮತ್ತು ಮರಣ ವಿಭಾಗದ ) ಒಂದು ಪ್ರತಿಗೆ ಉಚಿತವಾಗಿ ಎರಡನೆಯ ಪ್ರತಿಗೆ ರೂ 5 ಗಳಂತೆ ಸಾರ್ವಜನಿಕರಿಂದ ಸ್ವೀಕರಿಸಬೇಕೆಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರಕಟಿಸಿರುತ್ತಾರೆ. ಮಹಾ ನಗರ ಪಾಲಿಕೆಯ ಜನನ ಮತ್ತು ಮರಣ ಅಧಿಕಾರಿ (ರಚನ) ರವರ ಪ್ರಾಮಾಣಿಕ ಕರ್ತವ್ಯ ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿರುವಂಹ ಪ್ರಮಾಣಿಕ ಅಧಿಕಾರಿಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಪ್ರಾಮಾಣಿಕ ಅಧಿಕಾರಿಯ ನಿರ್ಧಾರದಿಂದ‌.

ಕೆಲ ಹಳೆಯ ಪತ್ರಕರ್ತರಿಗೆ ಮೆಣಸಿನಕಾಯಿ ಇಟ್ಟಂತಾಗಿದೆ. ಈ ರೀತಿಯಾಗಿ ಸಮಾಜದಲ್ಲಿ ಭ್ರಷ್ಟರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸರಿಯಾದ ಹೆಜ್ಜೆ ಇಡುವಂತ ಪತ್ರಕರ್ತರನ್ನು ಶಿವಮೊಗ್ಗ ನಗರದ ಕೆಲ ಹಳೆಯ ಪತ್ರಕರ್ತರು ಇಲ್ಲಸಲ್ಲದ ಆರೋಪಗಳನ್ನು ಆರೋಪಿಸಿ, ಶಿವಮೊಗ್ಗ ನಗರದ ಕೆಲ ಭ್ರಷ್ಟ ಅಧಿಕಾರಿಗಳು ನಿಡುತ್ತಿರುವ ಎಂಜಲು ಕಾಸಿಗಾಗಿ ಸತ್ಯವನ್ನೇ ಕೊಲೆ ಮಾಡುತ್ತಿರುವಂತಹ ಕೆಲ ಹಳೆಯ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಭ್ರಷ್ಟಾಚಾರ ಅಧಿಕಾರಿಗಳ ವಿರುದ್ಧ ಹೋರಾಡುತ್ತಿರುವಂತ

ಸಿಟಿ ರೌಂಡ್ಸ್ ಪತ್ರಿಕೆಯ ಹೋರಾಟಕ್ಕೆ ಸಿಕ್ಕ ಜಯ.