City Rounds News

Kannada News Website

ವ್ಯಕ್ತಿ ಸಾವು : ವಾರಸುದಾರರ ಪತ್ತೆಗೆ ಮನವಿ

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

ಶಿವಮೊಗ್ಗ :ನವೆಂಬರ್ 05 ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಕುರುವಳ್ಳಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ರಮೇಶ್, ಸುಮಾರು 45 ವರ್ಷ ಈತನು ಅಸ್ವಸ್ಥನಾದ ಕಾರಣಕ್ಕೆ ಅ.24 ರಂದು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ವೈದ್ಯರು ಪರೀಕ್ಷಿಸಿ ಮೃತಪಟ್ಟಿರುತ್ತಾನೆಂದು ತಿಳಿಸಿರುತ್ತಾನೆ.

 ರಮೇಶ್ ತಾನು ಮಂಗಳೂರಿನ ಕಡೆಯಿಂದ ಬಂದವನು, ತನಗೆ ಯಾರೂ ಇಲ್ಲ, ಕೆಲಸ ನೀಡಿರೆಂದು ಕೂಲಿ ಕೆಲಸಕ್ಕೆ ಸೇರಿರುತ್ತಾನೆ. ಪ್ರತಿ ದಿನ ಮದ್ಯಪಾನ ಮಾಡಿ ಅಸ್ವಸ್ಥನಾಗಿರುತ್ತಾನೆ. ಶವವನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

 ಮೃತನು 5 ಅಡಿ ಎತ್ತರ, ಎದೆ ಮೇಲೆ ಜ್ಯೋತಿ ಅಂತ ಹಚ್ಚೆ ಇದ್ದು, ಹೊಟ್ಟೆ ಮೇಲೆ 4*2 ಇಂಚು ಉದ್ದ ಅಗಲದ ಮಚ್ಚೆ ಇರುತ್ತದೆ. ಕುರುಚಲು ಗಡ್ಡ, 02 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು ಇದ್ದು ಕೆಂಪು ತುಂಬು ತೋಳಿನ ಷರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.

 ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಠಾಣಾಧಿಕಾರಿ, ತೀರ್ಥಹಳ್ಳಿ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ ಇವರನ್ನು ಸಂಪರ್ಕಿಸ ಬಹುದೆಂದು ಪ್ರಕಟಣೆ ತಿಳಿಸಿದೆ.