ಶಿವಮೊಗ್ಗ: ಬೆಳಕು ನೀಡದ ಬೀದಿ ದೀಪಗಳು ಕತ್ತಲಲ್ಲಿ ಸಾರ್ವಜನಿಕರ ಪರದಾಟ..!

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ

ಶಿವಮೊಗ್ಗ ಮಹಾ ನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ನಿರ್ವಹಿಸುತ್ತಿರುವ ಬೀದಿ ದೀಪಗಳ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಬೀದಿ ದೀಪಗಳು ದುರಸ್ತಿಯಾಗಿ ಕತ್ತಲಲ್ಲಿ ಹಲವು ಬಡಾವಣೆಯ ಸಾರ್ವಜನಿಕರು ಓಡಾಡುವಂತಾಗಿದೆ. ಶಿವಮೊಗ್ಗ ನಗರದ ಬೀದಿ ದೀಪಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆ ಪಡೆದಂತಹ ಗುತ್ತಿಗೆದಾರರಾದ ಮಂಜುನಾಥ್ ಎಲೆಕ್ಟ್ರಿಕಲ್ ಎಂಬ ಗುತ್ತಿಗೆದಾರರು ಸುಮಾರು 5-6 ವರ್ಷಗಳಿಂದ ಶಿವಮೊಗ್ಗ ನಗರದ ಮಹಾ ನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಒಳಪಡುವಂತ ಬೀದಿ ದೀಪಗಳ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿಲ್ಲ. ಎಂದು ದೂರುಗಳು ಬಂದಿದ್ದರು. ಮರು ಟೆಂಡರ್ ಪ್ರಕ್ರಿಯೆ ಗಳಿಸಿದೆ ,ಗುತ್ತಿಗೆದಾರದ ಮಂಜುನಾಥ್ ಎಲೆಕ್ಟ್ರಿಕಲ್ ರವರನ್ನೆ ಬೀದಿ ದೀಪಗಳ ನಿರ್ವಹಣೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಹೇಳುವ ಪ್ರಕಾರ ಮಂಜುನಾಥ್ ಎಲೆಕ್ಟ್ರಿಕಲ್ ಗುತ್ತಿಗೆದಾರರು ಮ‌ಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಲಂಚವನ್ನು ನೀಡಿರಬಹುದೆ ಎಂಬ ಸಂಶಯವೂ ಹಲವು ಬಡಾವಣೆಯ ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ಅನುಮಾನ ಪಡಲು ಕಾರಣ. ಬೀದಿ ದೀಪಗಳನ್ನು ವರ್ಷದಲ್ಲಿ ಹಲವು ಬಾರಿ ಬದಲಾವಣೆ ಮಾಡಲಾಗಿದೆ ಇನ್ನು ಕೆಲವು ಕಡೆ ದುರಸ್ತಿಯಲ್ಲಿಯೇ ಬಿಡಲಾಗಿದೆ. ಹಾಗಾದರೆ ಗುತ್ತಿಗೆದಾರನಾದ ಮಂಜುನಾಥ್ ಎಲೆಕ್ಟ್ರಿಕಲ್ ರವರ ವಿರುದ್ಧ ಕಾನೂನು ಕ್ರಮ ಜರಗಿಸುತ್ತಿಲ್ಲವೇಕೆ. ಸಂಬಂಧ ಪಟ್ಟಂತಹ ಅಧಿಕಾರಿಗಳಿಗೆ ದೂರು ನೀಡಿದ್ದರು ಕ್ರಮ ಕೈಗೊಳ್ಳುತ್ತಿಲ್ಲವೇಕೆ. ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಸಿಟಿ ಎಂಬ ಹೆಸರಿನಲ್ಲಿ ನೂರಾರು ಕೋಟಿ ಸಾರ್ವಜನಿಕರ ತೆರಿಗೆ ಹಣದಿಂದ ಅನುಷ್ಠಾನಗೊಂಡಂತಹ ಬೀದಿ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಅನೇಕ ಬಡಾವಣೆಯಲ್ಲಿ ಬೀದಿ ದೀಪಗಳು ದುರಸ್ತಿಯಾಗಿ ಕತ್ತಲಲ್ಲಿ ಓಡಾಡುವಂತಾಗಿದೆ. ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರಿಗೆ ಶಿವಮೊಗ್ಗ ನಗರದ ಸಾರ್ವಜನಿಕರಿಂದ ದೂರು.

You may have missed