City Rounds News

Kannada News Website

ಶಿವಮೊಗ್ಗ : ವಯೋನಿವೃತ್ತಿ ಹೊಂದಿದಂತ ಪೊಲೀಸರಿಗೆ “ಬೀಳ್ಕೊಡುಗೆ” ಹಾಗೂ”ಸನ್ಮಾನ”

 ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.   

 

 ಶಿವಮೊಗ್ಗ : ದಿನಾಂಕಃ 31-10-2024 ರಂದು ವಯೋನಿವೃತ್ತಿಯನ್ನು ಹೊಂದಿದಂತ . ಶ್ರೀ ಕೆ ಟಿ. ಚೌಡಪ್ಪ, ಎಎಸ್ಐ ಸೊರಬ ಪೊಲೀಸ್ ಠಾಣೆ,

ಶ್ರೀ ಚಿಕ್ಕೇಗೌಡ, ಟಿ, ಎಎಸ್ಐ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಶ್ರೀ ಬಸವರಾಜಪ್ಪ, ಎಂ. ಎ.ಆರ್.ಎಸ್.ಐ, ಡಿಎಆರ್ ಶಿವಮೊಗ್ಗ ರವರು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ, ಇವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶ್ರೀ ಮಿಥುನ್ ಕುಮಾರ್ ಜಿ. ಕೆ. ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಶುಭ ಕೋರಿ ಬೀಳ್ಕೊಡುಗೆ ನೀಡಿದರು.