City Rounds News

Kannada News Website

ದೆವ್ವ ಬಂತು ದೆವ್ವ..? ಇದು ಸುಳ್ಳು ದೆವ್ವ 

ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ

 

     ದಿನಾಂಕಃ 27-10-2024 ರಂದು ರಾತ್ರಿ ಸಾಗರ ತಾಲ್ಲೂಕಿನ ಕಾರ್ಗಲ್ ನ ಸಮೀಪ ಕಂಚಿಕೈ ರಸ್ತೆಯಲ್ಲಿ ಎರಡು ಜನ ಬೈಕ್ ಸವಾರರಿಗೆ ದೆವ್ವ ಎದುರಾಗಿ ಒಬ್ಬರಿಗೆ ತುಂಬಾ ಸೀರಿಯಸ್ ಆಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಮತ್ತು ಇನ್ನೊಬ್ಬರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುತ್ತಾರೆಂದು ಪೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದು ಸುಳ್ಳು ಸುದ್ಧಿಯಾಗಿರುತ್ತದೆ ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇರುವುದಿಲ್ಲ. ಈ ರೀತಿಯ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿರುವುದಿಲ್ಲ.

 

       ಸುಳ್ಳು ಸುದ್ಧಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು, ಫಾರ್ವರ್ಡ್ ಮಾಡುವುದು, ಶೇರ್ ಮಾಡುವುದು ಕಾನೂನು ರೀತ್ಯಾ ಅಪರಾಧವಾಗಿದ್ದು, ಈ ರೀತಿ ಮಾಡುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆಯಿಂದ ಎಚ್ಚರಿಕೆ ನೀಡಿದೆ.