City Rounds News

Kannada News Website

ಹೊಳೆ ಹೊನ್ನೂರು ಸಮೀಪ  ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು  ಬಂಧಿಸಿದ ಪೊಲೀಸರು :

ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ

   ದಿನಾಂಕ: 28-10-2024 ರಂದು ಮಧ್ಯಾಹ್ನ  ಭದ್ರಾವತಿ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆ ಹೊನ್ನೂರು ಕ್ರಾಸ್ ನಿಂದ ಸೀಗೆಬಾಗಿ ಕಡೆಗೆ ಹೋಗುವ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ    2 ದ್ವಿಚಕ್ರವಾಹನದಲ್ಲಿ ಬಂದ  ಅಪರಿಚಿತ ವ್ಯಕ್ತಿಗಳು  ಮಾದಕ ವಸ್ತು

ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ  ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ,  ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1  ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ  ಶ್ರೀ ನಾಗರಾಜ್  ಪೊಲೀಸ್  ಉಪಾಧೀಕ್ಷಕರು ಭದ್ರಾವತಿ ಉಪ ವಿಭಾಗ ರವರ ನೇತೃತ್ವದಲ್ಲಿ, ಶ್ರೀ ಚಂದ್ರಶೇಖರ ನಾಯ್ಕ್ ಪಿಎಸ್ಐ ಹಳೆನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ಸ್ಥಳಕ್ಕೆ  ಹೋಗಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ  ಆರೋಪಿತರಾದ  1) ನವೀನ್ @ ನವೀನ್ ಬಾಬು ಬಿ @ ಬಿ ಡಿ ನವೀನ, 24 ವರ್ಷ ಕೃಷ್ಣಾಪುರ ಮಂಗಳೂರು, 2) ದರ್ಶನ್, 19 ವರ್ಷ, ಕಾಳಿಂಗನಹಳ್ಳಿ ಭದ್ರಾವತಿ, 3) ವಿಷ್ಣು ಗವಾಡೆ ಎಂ ವಿ @ಬೆಣ್ಣೆ 24 ವರ್ಷ, ಕಂಚಿಬಾಗಿಲು ಭದ್ರಾವತಿ, 4) ಮಂಜು @ ಸಣ್ಣ ಮಂಜ @ ಮಂಜುನಾಥ, 24 ವರ್ಷ ಹೊಸಮನೆ ಭದ್ರಾವತಿ, 5) ಸಚಿನ್ ಎಸ್, 23 ವರ್ಷ, ಸಿಡಕನಹಳ್ಳಿ, ಚಿಕ್ಕಮಗಳೂರು, 6) ಪ್ರಸಾದ್ ಎಸ್, 23 ವರ್ಷ, ಹೊಸಮನೆ ಭದ್ರಾವತಿ ಇವರುಗಳನ್ನು ದಸ್ತಗಿರಿ ಮಾಡಿ, ಸದರಿ ಆರೋಪಿತರಿಂದ ಅಂದಾಜು ಮೌಲ್ಯ 30,000/-  ರೂ ಗಳ ಒಟ್ಟು 1 ಕೆಜಿ 300 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡು, ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ  ಗುನ್ನೆ ಸಂಖ್ಯೆ  0174/2024 ಕಲಂ 20(b)(ii)(B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.