ಪೋಲಿಸರ ಮಿಂಚಿನ ಕಾರ್ಯಚರಣೆ, 48 ಗಂಟೆಗಳಲ್ಲಿ ಕಳ್ಳರ ಬಂಧನ

ಶಿವಮೊಗ್ಗ : (ಸಿಟಿ ರೌಂಡ್ಸ್ ನ್ಯೂಸ್)
ಅಣ್ಣಪ್ಪ ಎಂ

ದಿನಾಂಕ: 15-10-2024 ರಂದು ಶ್ರೀ ಸುಧಾಕರ್, 55 ವರ್ಷ, ಹಾರೋ ಹಿತ್ತಲು ಗ್ರಾಮ ಹೊಸನಗರರವರು ತಮ್ಮ BAJAJ CT 100 ದ್ವಿಚಕ್ರ ವಾಹನವನ್ನು ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ 9ನೇ ಮೈಲಿ ಕಲ್ಲಿನ ಹತ್ತಿರ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0107/2024 ಕಲಂ 303(2) BNS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. 

ಪ್ರಕರಣದಲ್ಲಿ ಕಳುವಾದ ದ್ವಿಚಕ್ರ ವಾಹನ ಮತ್ತು ಆರೋಪಿತರ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ ಕೆ, ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶದಲ್ಲಿ, ಶ್ರೀ ಗಜಾನನ ವಾಮನ ಸುತಾರ, ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪವಿಭಾಗ ಮತ್ತು ಶ್ರೀ ಗುರಣ್ಣ ಹೆಬ್ಬಾರ್ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್, ಹೊಸನಗರ ವೃತ್ತ ರವರ ಮೇಲ್ವಿಚಾರಣೆಯಲ್ಲಿ ಶ್ರೀ ಪ್ರವೀಣ್ ಪೋಲಿಸ್ ಉಪನಿರೀಕ್ಷಕರು ರಿಪ್ಪನ್ ಪೇಟೆ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿ.ಹೆಚ್.ಸಿ ಚನ್ನಪ್ಪ ಮತ್ತು ಸಿಪಿಸಿ ಸಂತೋಷ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ಈ ದಿನ ದಿನಾಂಕ 17-10-2024 ರಂದು ಪ್ರಕರಣದ ಆರೋಪಿತರಾದ 1) ಸಾದಿಕ್ ವುಲ್ಲಾ @ ಚಮಟಿ, 21 ವರ್ಷ, ಅಣ್ಣಾ ನಗರ ಶಿವಮೊಗ್ಗ ಮತ್ತು 2) ವಿವೇಕ್ @ ಸಿದ್ದು 23 ವರ್ಷ ಅಣ್ಣ ನಗರ ಶಿವಮೊಗ್ಗ, ಇವರನ್ನು ದಸ್ತಗಿರಿ ಮಾಡಿ ಆರೋಪಿತರಿಂದ ಅಂದಾಜು ಮೌಲ್ಯ 25,000/- ರೂಗಳ BAJAJ CT-100 ದ್ವಿಚಕ್ರವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

You may have missed