( ಸಿಟಿ ರೌಂಡ್ಸ್ ನ್ಯೂಸ್ ) ಅಣ್ಣಪ್ಪ ಎಂ.
ಸೊರಬ: ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಬಂಗಾರಪ್ಪ ನವರ ೯೨ ನೇ ಹುಟ್ಟುಹಬ್ಬದ ಅಂಗವಾಗಿ “ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಅಭಿಮಾನಿ ಬಳಗ”ದ ಸಂಯುಕ್ತಾಶ್ರಯದಲ್ಲಿ ಇದೇ ತಿಂಗಳ ಅಕ್ಟೋಬರ್ ೨೬ ರಂದು ಸೊರಬದ ಬಂಗಾರಧಾಮದಲ್ಲಿ “ನಮನ, ಚಿಂತನ ಮತ್ತು ಸನ್ಮಾನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ…
ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ಗೃಹಮಂತ್ರಿಗಳಾದ ಸನ್ಮಾನ್ಯ ಶ್ರೀಯುತ ಜಿ. ಪರಮೇಶ್ವರ್ ಅವರನ್ನು ಬಂಗಾರಪ್ಪ ವಿಚಾರ ವೇದಿಕೆಯ ಅಧ್ಯಕ್ಷರಾದ ಶ್ರೀ ಎಸ್. ವೇಣುಗೋಪಾಲ್ ನಾಯ್ಕ್ ಅವರೊಂದಿಗೆ ಭೇಟಿಯಾಗಿ ಆಹ್ವಾನಿಸಲಾಯಿತು.
ರಾಜ್ಯದ ಗೃಹಮಂತ್ರಿಗಳಾದ ಸನ್ಮಾನ್ಯ ಶ್ರೀಯುತ ಜಿ. ಪರಮೇಶ್ವರ್ ಅವರು ಸೇರಿದಂತೆ ರಾಜ್ಯದ ಹಲವಾರು ಗಣ್ಯರು, ಮಹನೀಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸೊರಬದ ಬಂಗಾರಧಾಮದಲ್ಲಿ “ಬಂಗಾರಪ್ಪನವರ ಹುಟ್ಟು ಹಬ್ಬದ” ಪ್ರಯುಕ್ತ ದಿನ ಪೂರ್ತಿ ಅದ್ದೂರಿಯಾಗಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅನೇಕ ಗಣ್ಯರಿಗೆ ಬಂಗಾರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಹಾಗೂ ಬಂಗಾರಪ್ಪ ನವರ ಚಿಂತನೆಯ ಕುರಿತಂತೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಬಂಗಾರಪ್ಪನವರ ಸಮಾಜವಾದಿ ಚಿಂತನೆಗಳ ಇಂದಿನ ಪ್ರಸ್ತುತತೆಯ ಬಗ್ಗೆ ವಿಚಾರಮಂಡನೆ ಹಾಗೂ ಜಾನಪದ ವೈಭವ ಕಾರ್ಯಕ್ರಮ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ…

More Stories
ವಯೋಸಹಜ ದೌರ್ಬಲ್ಯಗಳಿಂದ ಮುಕ್ತರಾಗಲು ಯೋಗಭ್ಯಾಸ ಸಹಕಾರಿ : ಪ್ರಭುಲಿಂಗ ಕವಳಿಕಟ್ಟಿ
ಸೀಸದಿಂದ ಮಕ್ಕಳ ಮೆದುಳಿಗೆ ಹಾನಿ:ಡಾ.ತುಪ್ಪಿಲ್ ವೆಂಕಟೇಶ್!! ಕುರಿ ಮತ್ತು ಮೇಕೆ ಸಾಕಾಣಿಕೆ ಉಚಿತ ತರಬೇತಿ..!! ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ..!!.!!
ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ : (ಎಂ ಎಸ್ ಪಿ) ಜಾರಿಗೋಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಸರ್ಕಾರಕ್ಕೆ ಒತ್ತಾಯ..!!