ಶಿವಮೊಗ್ಗ : ಸೆ-26: ನಗರದ ಹಲವು ವಾರ್ಡ್ಗಳ ಆರೋಗ್ಯ ನಿರೀಕ್ಷಕರು ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

ಮಹಾನಗರ ಪಾಲಿಕೆಯ ಸಂಬಂಧಿಸಿದ ಹಲವಾರು ವಾರ್ಡ್ಗಳಲ್ಲಿ ಕಸ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳನ್ನು ನಿರ್ವಹಣೆ ಮಾಡುತ್ತಿರುವಂತ ಹಾಗೂ ಆರೋಗ್ಯ ಸ್ವಚ್ಛತೆಗೆ ಸಂಬಂಧಪಟ್ಟಂತಹ ಆರೋಗ್ಯ ನಿರೀಕ್ಷಕರುಗಳು. ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೆ, ಸಂಬಳ ಹಾಗೂ ಗಿಂಬಳಕ್ಕಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆಯೇ ಎಂಬುದು ಸಾರಜನಿಕರ ದೂರು.

ನಗರವನ್ನು ಸ್ವಚ್ಛತೆ ಹಾಗೂ ಆರೋಗ್ಯವಾಗಿ ಕಾಪಾಡಿಕೊಳ್ಳುವಂತ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರಿಗೆ ನೀಡಲಾಗಿದೆ. ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೆ ನಗರವನ್ನು ತಮಗೆ ಸಂಬಂಧಪಟ್ಟಂತಹ ವಾರ್ಡ್ಗಳ ಬಡಾವಣೆಗಳನ್ನು, ರಸ್ತೆಗಳನ್ನು, ಪಾರ್ಕ್ ಗಳನ್ನು ಸರಿಯಾದ ರೀತಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಕಾರ್ಯನಿರ್ವಹಿಸದೆ, ಆರೋಗ್ಯ ನಿರೀಕ್ಷಕರುಗಳು ಸಾರ್ವಜನಿಕರಿಗೆ ಸರಿಯಾದ ರೀತಿಯಲ್ಲಿ ಸೇವೆ ಸಲ್ಲಿಸುವಲ್ಲಿ

ವಿಫಲರಾಗಿದ್ದಾರೆ ಎಂದು ಹಲವಾರು ಬಡಾವಣೆಗಳ ವಾರ್ಡ್ಗಳ ಸಾರ್ವಜನಿಕರಿಂದ ದೂರುಗಳು ಮಹಾನಗರ ಪಾಲಿಕೆಗೆ ಹಲವಾರು ಬಾರಿ ದೂರು ನೀಡಿದ್ದರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ ತೋರುತ್ತಿರುವಂತ ಹಲವಾರು ವಾರ್ಡ್ ಗಳ ಆರೋಗ್ಯ ನಿರೀಕ್ಷಕರಗಳ ವಿರುದ್ಧ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ರವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಸಾರ್ವಜನಿಕರ ನಿರೀಕ್ಷೆ ಆಗಿದೆ.
ಹಾಗೂ ನಗರದ ಹಲವಾರು ಬಡಾವಣೆಗಳ ಪಾರ್ಕ್ ಗಳ, ರಸ್ತೆಗಳ, ಕನ್ಸರ್ವೆನ್ಸಿಗಳ ಸರಿಯಾದ ರೀತಿಯಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬುನಾರುತಿದ್ದು, ವಾಸನೆ ಹಾಗೂ ಇನ್ನಿತರ ಅನಾರೋಗ್ಯ ಸೃಷ್ಟಿಸುವಂತಹ ವಾತಾವರಣ ಸೃಷ್ಟಿಯಾಗಿದ್ದು. ಸಾರ್ವಜನಿಕರು ಬಡಾವಣೆಗಳ ನಿವಾಸಿಗಳು ವಾಸನೆಯಿಂದ, ಅನಾರೋಗ್ಯದಿಂದ ಬಳಲುತ್ತಿದ್ದು, ಈ ವಿಚಾರವಾಗಿ ಮಹಾನರ ಪಾಲಿಕೆ ಆಯುಕ್ತರು ಸರಿಯಾದ ಕ್ರಮ ಕೈಗೊಳ್ಳಬೇಕೆಂದು, ಸಾರ್ವಜನಿಕರ ಪರವಾಗಿ (ಸಿಟಿ ರೌಂಡ್ಸ್) ಪತ್ರಿಕೆಯ ಬಳಗದಿಂದ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರಿಗೆ ಮನವಿ.





More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ