City Rounds News

Kannada News Website

ಯಮನ ರೂಪದಲ್ಲಿ ಬಂದ ಮೊಬೈಲ್ ಕರೆ, ಊಟಕ್ಕಾಗಿ ನಡೆದ ಕೊಲೆ

 ಶಿವಮೊಗ್ಗ: ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.

 

ಶಿವಮೊಗ್ಗ:  ಶಿಕಾರಿಪುರ ತಾಲ್ಲೂಕಿನ ಅಂಬ್ಲಿಗೋಳ ಗ್ರಾಮದ ನಿವಾಸಿ ಮನು ಎಂಬ ವ್ಯಕ್ತಿ ತನ್ನ ಹೆಂಡತಿಯನ್ನು ಟವಲ್ ಇಂದ ಕುತ್ತಿಗೆ ಭಾಗಕ್ಕೆ ಬಿಗಿದು ಕೊಲೆ ಗೈದಿದ್ದಾನೆ ಎಂದು ತಿಳಿದುಬಂದಿದೆ .

26 ವರ್ಷದ ಗೌರಮ್ಮ ಗಾರ್ಮೆಂಟ್ಸ್ ನಲ್ಲಿ ಉದ್ಯೋಗ ಮಾಡುತ್ತಿದ್ದಂತಹ ಮಹಿಳೆ ಈಕೆಯ ಪತಿ 34ವರ್ಷ ವಯಸ್ಸಿನ  ಮನು ಎಂಬಾತನು ದಿನಾಂಕ 09- 11-2024 ರಂದು ಸುಮಾರು ಮಧ್ಯಾಹ್ನ 3 -4 ಗಂಟೆ ಸುಮಾರಿಗೆ ಮನೆಗೆ ಮನು ಮನೆಗೆ ಬಂದಿದ್ದಾನೆ .

ಮನೆಗೆ ಬಂದ ಪತಿ ಮನು ಪತ್ನಿ ಗೌರಮ್ಮಳಿಗೆ ಊಟ ಬಡಿಸಲು ಹೇಳಿದ್ದಾನೆ, ಆದರೆ ತನ್ನ ಹೆಂಡತಿ ಗೌರಮ್ಮ ಮೊಬೈಲ್ ಫೋನಿನಲ್ಲಿ ಯಾರೊಂದಿಗೂ ಮಾತನಾಡುತ್ತಿದ್ದ ಕಾರಣ ಪತಿಗೆ ನೀವೇ ಊಟ ಬಡಿಸಿಕೊಂಡು ಊಟ ಮಾಡಿ ಎಂದು ಸೂಚಿಸಿದ್ದಾಳೆ, ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು  ಕೋಪಗೊಂಡಂತ ಗೌರಮ್ಮಳ ಪತಿ ಮನು ಪತ್ನಿಯನ್ನು ಟವಲ್ನಿಂದ ಕುತ್ತಿಗೆಯ ಭಾಗಕ್ಕೆ ಬಿಗಿದು ಕೊಲೆ ಮಾಡಿರುತ್ತಾನೆ ಎಂದು ಗೌರಮ್ಮಳ ತಂದೆ, ಕೊಲೆ ಪ್ರಕರಣದ ಆರೋಪಿಯ ಮಾವ ನೀಡಿದ ದೂರಿನ ಮೇರೆಗೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಕೊಲೆ ಪ್ರಕರಣದ ಆರೋಪಿ ಮನು ಕೊಲೆಯಾದ ಗೌರಮ್ಮಳ ಪತಿ, ಮನು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.