ಶಿವಮೊಗ್ಗ ಸಿಟಿ ರೌಂಡ್ಸ್ ನ್ಯೂಸ್
ಅಣ್ಣಪ್ಪ ಎಂ.
ಅಕ್ಟೋಬರ್ 30 ರಂದು ಧಾರವಾಡ ಕಾನೂನು ವಿಶ್ವವಿದ್ಯಾನಿಲಯ ದಲ್ಲಿ ಇಂಟರ್ ಯೂನಿವರ್ಸಿಟಿ ಕರಾಟೆ ಪಂದ್ಯಾವಳಿ ಯಲ್ಲಿ ಶಿವಮೊಗ್ಗದ ಉಮೇಶ್ ಹಾಗೂ ಶೀಲಾವತಿ ಇವರ ಮಗಳಾದ ದೀಕ್ಷಾ . ಯು
CBR ರಾಷ್ಟ್ರೀಯ ಕಾನೂನು ಕಾಲೇಜಿನ ಮತ್ತು ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ವಿದ್ಯಾರ್ಥಿಯು ಮೈನಸ್ 67 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜನವರಿ 6 , 7 ಮತ್ತು 8 ರಂದು ಚೆನ್ನೈನಲ್ಲಿ ನಡೆಯಲಿರುವ
ಸೌತ್ – ವೆಸ್ಟ್ ಇಂಟರ್ ಯೂನಿವರ್ಸಿಟಿ ಮಹಿಳಾ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿರುತ್ತಾರೆ.
ಆಯ್ಕೆಯಾದಂತಹ ಕ್ರೀಡಾಪಟುವಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಜಿ.ಎಸ್. ನಾರಾಯಣರಾವ್, ಸಂಸ್ಥೆಯ ಕಾರ್ಯದರ್ಶಿಯಾದಂತಹ ಶ್ರೀಯುತ ಎಸ್ಎನ್ ನಾಗರಾಜ ರವರು, ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್ ,ಹಾಗೂ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾದಂತಹ ಶಿಹಾನ್ ಎ . ಝೆಡ್ . ಮುಹೀಬ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯದಂತಹ ಸನ್ ಸೈ ನವೀನ್, ಜಿಲ್ಲಾ ಉಪಾಧ್ಯಕ್ಷರಾದಂತಹ ಸನ್ ಸೈ ಸಾಧಿಕ್, ತರಬೇತಿದಾರರಾದ ಸನ್ ಸೈ ಮಂಜುನಾಥ್ ರವರು ಅಭಿನಂದಿಸುತ್ತಾರೆ.

More Stories
ಜೈಲಿನ ಖೈದಿಗಳ ಬಳಿ ವರ್ಷದಿಂದ ವರ್ಷಕ್ಕೆ ಮೊಬೈಲ್ಗಳ ಸಂಖ್ಯೆಯಲ್ಲಿ ಹೆಚ್ಚಳ : 410 ವಿವಿಧ ಕಂಪನಿಯ ಮೊಬೈಲ್ ಪತ್ತೆ..!!
ಕಸ್ತೂರಿ ರಂಗನ್ ವರದಿ ಕುರಿತು ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಟ್ಟ ಸೂಚನೆಯಾದರೂ ಏನು ..?
ಸಂಗ್ರ ಹ ಮಾಡಲಾಗಿರುವ ಅಕ್ರಮ ಮರಳನ್ನು ತ್ವರಿತವಾಗಿ ವಿಲೇಮಾಡಿ : ಪ್ರಭುಲಿಂಗ ಕವಳಿಕಟ್ಟಿ